ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢ ಶಾಲೆ ಕಳತ್ತೂರು ಇಲ್ಲಿ ಮಾರ್ಚ್ 3, ಶುಕ್ರವಾರ ಸಂಜೆ ಗಂಟೆ 5ರಿಂದ ಶಾಲೆಯ ನಿವೃತ್ತ ಶಿಕ್ಷಕರಾದ ಗೋಪಾಲ ಕೃಷ್ಣ ರಾವ್ ಅವರಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳ ಮುಂದಾಳತ್ವದಲ್ಲಿ ಗುರುವಂದನಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಮನೋರಂಜನ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರ ತುಳು ಹಾಸ್ಯಮಯ ನಾಟಕ ಬುಡೆದಿ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದು, ಪಡುಬಿದ್ರಿಯ ಸಂಸ್ಕೃತ ಅಧ್ಯಾಪಕ ಡಾ| ರಾಘವೇಂದ್ರ ರಾವ್, ಆರ್. ಎಸ್. ಎಸ್ ಹಿರಿಯ ಪ್ರಚಾರಕ ಶ್ರೀ ದಾ.ಮಾ. ರವೀಂದ್ರ, ವಿದ್ಯಾವರ್ಧಕ ಸಂಘ, (ರಿ) ಕಳತ್ತೂರು ಇದರ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪೈಯ್ಯಾರು, ಪಿ.ಕೆ.ಎಸ್ ಪ್ರೌಢಶಾಲೆಯ ಸಂಚಾಲಕ ಶಿವರಾಮ್ ಶೆಟ್ಟಿ ಪೈಯ್ಯಾರು, ಪಿ ಕೆ ಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.