ಬೆಳಪು : ಗ್ರಾಮದ ಪಣಿಯೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಣಿಯಾರು ಶ್ರೀ ಬಬ್ಬು ಸ್ವಾಮಿ ಸನ್ನಿಧಿಯಲ್ಲಿ ಫೆಬ್ರವರಿ 12ರಂದು ಬಿಡುಗಡೆಗೊಳಿಸಲಾಯಿತು.
ಫೆಬ್ರವರಿ 21ರಿಂದ ಫೆಬ್ರವರಿ 25ರವರೆಗೆ ಪುನರು ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ನೆರವೇರಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|| ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಈ ಸಂದರ್ಭ ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರು ಗುತ್ತು, ಗುರಿಕಾರ ಬಿ ಶಂಕರ್, ಜಯಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ ಎಲ್ಲೂರು ಗುತ್ತು, ನಡಿಮನೆ ದೇವರಾಜ ರಾವ್, ಕರುಣಾಕರ್ ಶೆಟ್ಟಿ ಪಣಿಯಾರು ಗುತ್ತು, ಸಾಧು ಶೆಟ್ಟಿ, ಸಚಿನ್ ಶೆಟ್ಟಿ, ಸೌಮ್ಯ ಸುರೇಂದ್ರ, ಮಹೇಶ್ ಶೆಟ್ಟಿ, ಶಿವ ಪೂಜಾರಿ, ಸಂಜೀವ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮತ್ತಿತರರು ಉಪಸ್ಥಿತರಿದ್ದರು.