ಕಟಪಾಡಿ : ನಾವು ಇಂದು ಸಾಧು ಸಂತರುಗಳನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಆಗುವಂತೆ ಮಾಡುತ್ತಿದ್ದೇವೆ. ಸಾಧು ಸಂತರು ಎಲ್ಲ ಜಾತಿ ಧರ್ಮಕ್ಕೆ ಒಳಪಟ್ಟಿರುವುದರಿಂದ ದಯಮಾಡಿ ಅವರನ್ನು ವಿಭಜಿಸದಿರಿ ಎಂದು ಕೇಮಾರು ಸಾಂದಿಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಅವರು ಕಟಪಾಡಿ ಏಣ ಗುಡ್ಡೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಗುರ್ಮೆ ಪೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ರಮೇಶ್ ನಾಯಕ್, ಗಣಪತಿ ನಾಯಕ್, ವೈ ಭರತ್ ಹೆಗಡೆ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ, ಗೀತಾಂಜಲಿ ಸುವರ್ಣ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.