ಉಡುಪಿ :- ವೈಧ್ಯಕೀಯ ಪ್ರತಿನಿಧಿಗಳ ಸಂಘ (ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಪ್ರಯುಕ್ತ ಕಳೆದ 50 ವಷ೯ಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಹಿರಿಯ ವೈದ್ಯ ಡಾII ಎಂ. ಅನಂತ ಪದ್ಮನಾಭ ಭಟ್ ಬುಕ್ಕಿಗುಡ್ಡೆ ರವರನ್ನು ಜುಲೈ 1 ರಂದು ಗೌರವಿಸಲಾಯಿತು.ಈ ಸಂದಭ೯ದಲ್ಲಿ ಅತಿಥಿಗಳಾಗಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಧನ್ವoತರಿ ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯ ದಾಸ್, ಕಾಯ೯ದಶಿ೯ ಪ್ರಸನ್ನ ಕಾರಂತ್ , ಮಿಲ್ಟನ್ ಒಲಿವರ್, ವೇಣು ಗೋಪಾಲ ಹೆಬ್ಬಾರ್, ಪ್ರಕಾಶ್ ಆಚಾರ್, ಮಾಧವ ವೈದ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು.