ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಮಾಚ್೯13, ಸೋಮವಾರ ಜರಗಲಿದೆ.
ಮಾಚ್೯ 12, ಆದಿತ್ಯವಾರ ಬೆಳಿಗ್ಗೆ ಗಂಟೆ 11:45ಕ್ಕೆ ಧ್ವಜಾರೋಹಣ ರಾತ್ರಿ ಗಂಟೆ 7ರಿಂದ ಅನ್ನ ನೈವೇದ್ಯದ ಅಗೆಲುಸೇವೆ, ಮಾಚ್೯ 13, ಸೋಮವಾರ ಸಂಜೆ ಗಂಟೆ 6:30ಕ್ಕೆ ಶ್ರೀ ಬೈದೇರುಗಳ ನೇಮೋತ್ಸವ, ರಾತ್ರಿ ಗಂಟೆ 8ಕ್ಕೆ
ಮಹಾ ಅನ್ನಸಂತರ್ಪಣೆ, ಮಾಚ್೯ 14, ಮಂಗಳವಾರ ಸಂಜೆ ಗಂಟೆ 3ಕ್ಕೆ ಮಾಯಂದಾಲ ನೇಮ ರಾತ್ರಿ ಗಂಟೆ 8ಕ್ಕೆ ಪರಿವಾರ ದೈವಗಳ ನೇಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.