ಕಾಪು : ಬ್ರಹ್ಮರ್ಷಿ ನಾರಾಯಣ ಗುರುಗಳ ಒಡನಾಡಿಯಾಗಿದ್ದು , ಕ್ರಾಂತಿಕಾರಿ ಸಮಾಜ ಸುಧಾರಣೆಯಲ್ಲಿ ಸುಧೀರ್ಘ ಕಾಲ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮಹತ್ತರ ಸುಧಾರಣೆಗಳನ್ನು ಯಶಸ್ವಿಯಾಗಿ ಸಾಧಿಸಿದ ಡಾ. ಪದ್ಮನಾಭನ್ ಪಲ್ಪು ಅವರ ಸಾಧನೆಗಳ ಕುರಿತು ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಬರೆದು ಪ್ರಕಟಿಸಿದ "ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು" ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 9ರಂದು ಮೂಡುಬೆಳ್ಳೆಯ "ಧುನಿ" ಬಯಲು ರಂಗಮಂಟಪದಲ್ಲಿ ನಡೆಯಿತು.
ಸುರತ್ಕಲ್ ಎನ್ ಐ ಟಿ ಕೆಯ ಪ್ರಾಧ್ಯಾಪಕರೂ, ಲೇಖಕರೂ ಆದ ಡಾ ಶಶಿಕಾಂತ ಕೌಡೂರು ಪುಸ್ತಕ ಬಿಡುಗಡೆಗೊಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಲೇಖಕ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಹಿರಿಯ ಬರಹಗಾರರೂ, ಸಂಶೋಧಕರೂ, ಕೇರಳ - ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮುಖಂಡರೂ ಆದ ಪಾಂಗಾಳ ಬಾಬು ಕೊರಗ, ಪಾಣ ಯಾನೆ ನಲಿಕೆ ಸಮಾಜಸೇವಾ ಸಂಘದ ಗೌರವಾಧ್ಯಕ್ಷರೂ, ಹಿರಿಯ ದೈವ ನರ್ತಕರೂ ಆದ ಸುಧಾಕರ ಪಾಣಾರ, ಕಾಸರಗೋಡಿನ ಕವಿ, ಕಥೆಗಾರ, ಲೇಖಕ, ಸಂಘಟಕ, ಕನ್ನಡಪರ ಹೋರಾಟಗಾರ ಸುಂದರ ಬಾರಡ್ಕ, ಕವಿ, ಲೇಖಕ, ಇತಿಹಾಸ ಸಂಶೋಧಕರಾದ ರಿಚರ್ಡ್ ದಾಂತಿ ಪಾಂಬೂರು ಮೊದಲಾದವರು ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.