ಉಡುಪಿ: - ಕನಾ೯ಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಜಲೈ - 3 ರಂದು ವೈದ್ಯರ ದಿನಾಚರಣೆ ಕಾಯ೯ಕ್ರಮದ ಅಂಗವಾಗಿ ಕುಂದಾಪುರ ಪರಿಸರದಲ್ಲಿ ಕಳೆದ 53 ವಷ೯ಗಳಿಂದ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|ಎ.ಎಸ್ ಕಲ್ಕೂರ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.
ಈ ಸಂದಭ೯ದಲ್ಲಿ ಅವರು ವೈದ್ಯಕೀಯ ಸೇವೆ ಬಗ್ಗೆ ಮಾತನಾಡಿದರು.
ಜಯ೦ಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್' ಕಾಯ೯ದಶಿ೯ ಪ್ರಸನ್ನ ಕಾರಂತ್, ಜಯ೦ಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮುಂತಾದವರಿದ್ದರು.
ಮಂಜುನಾಥ್ ಕಾರಂತ್ ಪ್ರಾಥಿ೯ಸಿದರು, ಅನಂತ ಕೃಷ್ಣ ಹೊಳ್ಳ ಪರಿಚಯಿಸಿದರು.ಪ್ರಕಾಶ್ ಆಚಾರ್ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.