ಶಿರ್ವ ಮಂಚಕಲ್ಲಿನ ಸಮಾಜ ಸೇವಕ ಪವನ್ ಕುಮಾರ್ ಅವರು ಇಂದ್ರಪುರ ಅಂಗನವಾಡಿ ಕೇಂದ್ರಕ್ಕೆ ಸುಮಾರು 39000 ವೆಚ್ಚದ ಧ್ವಜಸ್ತಂಭ ಮತ್ತು ಕುಡಿಯುವ ನೀರಿನ ಯಂತ್ರ ಹಾಗೂ 2 ಬಾಗಿಲನ್ನು ನೀಡಿದರು....ಅದರ ಉದ್ಘಾಟನಾ ಸಮಯದಲ್ಲಿ ಸಮಾಜ ಸೇವಕ ಪವನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು....
ಈ ಸಂಧರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಾರಿಜ ಪೂಜಾರ್ತಿ ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ವಾಗ್ಳೆ ,ಪಶು ವೈದ್ಯಧಿಕಾರಿಗಳಾದ ಡಾ.ಅರುಣ್ ಕುಮಾರ್ ಹೆಗ್ಡೆ ,ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅನಂತಪದ್ಮನಾಭ ನಾಯಕ್ ,ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀ ವಿಜಯ ,ಮಾಜಿ ಸದಸ್ಯರಾದ ಸುನಿಲ್ ಕಾಬ್ರಾಲ್,ರೋಟರಿ ಅಧ್ಯಕ್ಷರಾದ ವಿಷ್ಣುಮೂರ್ತಿ ಸರಳಾಯ ಹಾಗೂ ಅಂಗನವಾಡಿ ಶಿಕ್ಷಕಿ ಸುನಿತಾ ಪೂಜಾರಿಯವರು ಉಪಸ್ಥಿತರಿದ್ದರು...