ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ‌ : ಮತದಾನ ಜಾಗೃತಿ - ಕಿರುಚಿತ್ರ ಸ್ಪರ್ಧೆ ವಿಜೇತರು

Posted On: 19-03-2023 05:44PM

ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಪಡೆದ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ.

ಸಾಧನಾ ಕಟಪಾಡಿ ಅವರ ನನ್ನ ಮತ ನನ್ನ ಹೆಮ್ಮೆ ಕಿರು ಚಿತ್ರವು ಪ್ರಥಮ ಸ್ಥಾನ ಪಡೆದಿದ್ದು, 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಆದಿತ್ಯ ಅಂಬಲಪಾಡಿ ಅವರ ಓಟು=02 ಕಿರುಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು, 7,500 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಕೆ. ಸತ್ಯೇಂದ್ರ ಪೈ ಅವರ ಮತದಾರ ಕಿರುಚಿತ್ರವು ತೃತೀಯ ಸ್ಥಾನ ಪಡೆದಿದ್ದು, 5,000 ರೂ ನಗದು ಹಾಗೂ ಪ್ರಶಸ್ತಿ ಪತ್ರ, ಸುಚಿತ್ರ ಎಸ್ ಅವರ ಮತ ಸಂಭ್ರಮ ಕಿರು ಚಿತ್ರಕ್ಕೆ ನಾಲ್ಕನೇ ಸ್ಥಾನ ಲಭಿಸಿದ್ದು, 2,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಸತೀಶ್ ಕಲ್ಯಾಣಪುರ ಅವರ ನಮ್ಮ ಓಟು ನಮ್ಮ ಪವರ್ ಕಿರು ಚಿತ್ರವು ಐದನೇ ಸ್ಥಾನ ಪಡೆದಿದ್ದು, 1,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.