ಪಡುಬಿದ್ರಿ : ರಥೋತ್ಸವದ ಅಂಗವಾಗಿ ತುಳುನಾಡ ಕಲಾವಿದರು ವತಿಯಿಂದ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ
Posted On:
19-03-2023 09:48PM
ಪಡುಬಿದ್ರಿ : ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಪಡುಬಿದ್ರಿಯ ತುಳುನಾಡ ಕಲಾವಿದರು ಸಂಘಟನೆಯ ಕಾರ್ಯ ಶ್ಲಾಘನೀಯ. ಪಡುಬಿದ್ರಿ ಭಾಗದಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಹಲವಾರು ಪ್ರತಿಭೆಗಳಿವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿಯ ಅಧ್ಯಕ್ಷರಾದ ವೈ, ಸುಧೀರ್ ಕುಮಾರ್ ಹೇಳಿದರು.
ಅವರು ಮಾಚ್೯ 18 ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ರಥೋತ್ಸವದ ಅಂಗವಾಗಿ ತುಳುನಾಡ ಕಲಾವಿದರು ಪಡುಬಿದ್ರಿ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ಜನರಿಗೆ ಉತ್ತಮವಾದಂತಹ ಮನೋರಂಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆಯೇ ಮುಂದುರಿಯಲಿ ಎಂದರು.
ಕನ್ನಂಗಾರು ಬ್ರಹ್ಮ ಬೈದರ್ಕಳ ಗರಡಿಯ ಅರ್ಚಕರಾದ ಗಿರಿಧರ ಅಂಚನ್, ಬೆಂಗಳೂರಿನ ಯುವ ಉದ್ಯಮಿ ವಿಶ್ವಾಸ್ ವಿ ಅಮೀನ್, ಪಾದೆಬೆಟ್ಟು ಸುಬ್ರಹ್ಮಣ್ಯ ಯುವಕ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರೋಟರಿ
ಕ್ಲಬ್ ಪಡುಬಿದ್ರಿಯ ಪೂರ್ವಾಧ್ಯಕ್ಷರಾದ
ಕೃಷ್ಣ ಬಂಗೇರ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ : ಸಮಾಜ ಸೇವಕ ಕೃಷ್ಣ ಬಂಗೇರ, ಕಲಾ ಪೋಷಕಿ ಗೀತಾ ಅರುಣ್, ಸಾಂಸ್ಕೃತಿಕ ರಂಗದ ಯುವ ಪ್ರತಿಭೆ ವೈಷ್ಣವಿ ರಾವ್ ನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ. ಸುಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ರೋಟರಿ ವಲಯ 5ರ ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಪಡುಬಿದ್ರಿಯ ಯುವ ಉದ್ಯಮಿ ಸುನಿಲ್ ಕುಮಾರ್, ಪಡುಬಿದ್ರಿ ರೋಟರಿ ಅಧ್ಯಕ್ಷೆ ಗೀತಾ ಅರುಣ್ ಉಪಸ್ಥಿತರಿದ್ದರು.
ತುಳುನಾಡ ಕಲಾವಿದರು ಅಧ್ಯಕ್ಷ ವೈ ಸುಕುಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಯಶೋದ, ರಾಜೇಶ್ ಶೇರಿಗಾರ್, ಸಂತೋಷ್ ನಿರ್ವಹಿಸಿದರು. ಸ್ಥಾಪಕ ಅಧ್ಯಕ್ಷ ರವೀನ್ ಪಡುಬಿದ್ರಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ : ಓಂಕಾರ್ ಕಲಾ ಸಂಗಮ ಇವರಿಂದ ನೃತ್ಯ ವೈಭವ, ತುಳುನಾಡ ಕಲಾವಿದರಿಂದ ಕಿರು ನಾಟಕ ಪರಮ್ ವೀರ್, ವೈಷ್ಣವಿ ಕಲಾವಿದೆರ್ ಕೊಯಿಲ ಮಂಗಳೂರು ವತಿಯಿಂದ ಕುಸೆಲ್ದ ಗೌಜಿ ಹಾಸ್ಯಮಯ ಕಾರ್ಯಕ್ರಮ ಜರಗಿತು.