ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐವರು ವಶಕ್ಕೆ

Posted On: 22-03-2023 07:55PM

ಕಾಪು : ಇಲ್ಲಿನ ಪಡು ಗ್ರಾಮದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐದು ಜನರನ್ನು, ನಗದು ಸಹಿತ ಇತರೆ ವಸ್ತುಗಳನ್ನು ಕಾಪು ಪೋಲಿಸರು ವಶಪಡಿಸಿಕೊಂಡ ಘಟನೆ ಮಾಚ್೯ 22 ರಂದು ನಡೆದಿದೆ.

ಕಾಪು ಮಾರಿಗುಡಿ ಬಂದೋಬಸ್ತ್ ಪ್ರಯುಕ್ತ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ರೌಂಡ್ಸ್ ನಲ್ಲಿರುವ ಸಂದರ್ಭ ಬೆಳಿಗ್ಗೆ ಪಡು ಗ್ರಾಮದ ಕಾಪು ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ ಜೂಜಾಟ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ತೌಸಿಫ್, ದೀಪಕ್, ಶ್ರೀನಿವಾಸ, ಆದರ್ಶ್, ಮಂಜುನಾಥ ಎಂಬವವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.