ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಾಚ್೯ 24 : ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ

Posted On: 23-03-2023 01:59PM

ಉಡುಪಿ : ಇಲ್ಲಿನ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಮಾಚ್೯ 24, ಶುಕ್ರವಾರ ಚತುಃಪವಿತ್ರ ನಾಗಮಂಡಲೋತ್ಸವ ವಿದ್ವಾನ್ ವೇದಮೂರ್ತಿ ಹೆರ್ಗ ಜಯರಾಮ್ ತಂತ್ರಿ ಮತ್ತು ಹಾವಂಜೆ ಗುರುರಾಜ್ ಭಟ್ ಇವರ ನೇತೃತ್ವದಲ್ಲಿ, ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಶ್ರೀ ಕ್ಷೇತ್ರ ಕಲ್ಲಂಗಳ, ಕೃಷ್ಣಪ್ರಸಾದ್ ವೈದ್ಯ ಮುದ್ದೂರು ಮತ್ತು ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಬಳಗದವರ ಸಹಯೋಗದೊಂದಿಗೆ ನಡೆಯಲಿದೆ

ಮಾಚ್೯ 22 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರಕಾಣಿಕೆ ಹೊರಡಲಿರುವುದು. ಮಾಚ್೯ 24, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಪ್ರಾರ್ಥನೆ, ಪುಣ್ಯಾಹ ನಾಂದಿ, ಪ್ರಾಯಶ್ಚಿತ್ತ ಹೋಮಗಳು, ಪಂಚವಿಂಶತಿ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಆಶ್ಲೇಷ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ವಟು ಆರಾಧನೆ, ದ್ವಾದಶ ಮೂರ್ತಿ ಆರಾಧನೆ, ದಂಪತಿ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ ಗಂಟೆ 12ರಿಂದ ಭಕ್ತಿ ರಸಮಂಜರಿ ಸಪ್ತಸ್ವರ ಮ್ಯೂಸಿಕಲ್ಸ್, ಗೋಳಿಕಟ್ಟೆ ಹಾವಂಜೆ ಇವರಿಂದ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 4.30ರಿಂದ ಶ್ರೀ ಉಮಾಮಹೇಶ್ವರ ಮಹಿಳಾ ಭಜನಾ ಮಂಡಳಿ ಹಾವಂಜೆ ಮತ್ತು ಶ್ರೀ ಮಹಾಮಾಯಿ ತುಳಜಾ ಭವಾನಿ ಮಹಿಳಾ ಭಜನಾ ಮಂಡಳಿ ಹಾವಂಜೆ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6ರಿಂದ ದೀಪಾರಾಧನೆ, ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಗಂಟೆ 8 ರಿಂದ ಶಶಿಕಾಂತ್ ಶೆಟ್ಟಿ ಕಾರ್ಕಳ ಸಂಯೋಜನೆಯಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರ ಯಕ್ಷಗಾನ ಪ್ರಸಂಗ 'ಶ್ರೀ ಕೃಷ್ಣ ಪಾರಿಜಾತ', ರಾತ್ರಿ ಗಂಟೆ 10ಕ್ಕೆ ಹಾಲಿಟ್ಟು ಸೇವೆ, ಗಂಟೆ 10.30ಕ್ಕೆ ಮಂಡಲ ಪೂಜೆ, ಗಂಟೆ 11ಕ್ಕೆ : ನಾಗಮಂಡಲ ಸೇವೆ, ಗಂಟೆ 2:30ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

ಆ ಪ್ರಯುಕ್ತ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಮಹಾಅನ್ನಸಂತರ್ಪಣೆಯಲ್ಲಿಯೂ ಸರ್ವರು ಪಾಲ್ಗೊಳ್ಳಬೇಕೆಂದು ಶ್ರೀಮತಿ ಗುಲಾಬಿ ಬಿ. ಶೆಟ್ಟಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಇರ್ಮಾಡಿ ಶೆಟ್ಟಿಬೆಟ್ಟು ಹಾವಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನಾಗಮಂಡಲದ ನೇರಪ್ರಸಾರ ನಮ್ಮಉಡುಪಿ ಟಿವಿ ಫೇಸ್ಬುಕ್ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.