ಮಾಚ್೯ 27ರಿಂದ 29 : ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ ಮಲ್ಲಾರು ರಾಣ್ಯಕೇರಿ, ಕಾಪು - ಪುನರ್ ಪ್ರತಿಷ್ಠೆ, ಕಾಲಾವಧಿ ರಾಶಿ ಮಾರಿ ಪೂಜೆ
Posted On:
23-03-2023 08:34PM
ಕಾಪು : ಇಲ್ಲಿನ ಮಲ್ಲಾರು ರಾಣ್ಯಕೇರಿ ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಮಾಚ್೯ 27, ಸೋಮವಾರ ಬೆಳಿಗ್ಗೆ ಪುನರ್ ಪ್ರತಿಷ್ಠೆ ಹಾಗೂ
28,ಮಂಗಳವಾರ ಹಾಗೂ 29, ಬುಧವಾರದಂದು
ಕಾಲಾವಧಿ ರಾಶಿ ಮಾರಿಪೂಜೆಯು ಜರಗಲಿದೆ.
ಮಾಚ್೯ 27,ಸೋಮವಾರ ಬೆಳಿಗ್ಗೆ ಗಂಟೆ 7:30ಕ್ಕೆ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 11ಕ್ಕೆ ಚಂಡಿಕಯಾಗ ಪೂರ್ಣಾಹುತಿ, ಗಂಟೆ 11:30ಕ್ಕೆ ಕಲಶಾಭೀಷೇಕ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಮಾಚ್೯ 28, ಮಂಗಳವಾರ ಬೆಳಿಗ್ಗೆ ಗಂಟೆ 5ಕ್ಕೆ ಹೊರೆಕಾಣಿಕೆ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ ಗಂಟೆ 7:30ಕ್ಕೆ ಹೊರೆಕಾಣಿಕೆ ಕಟ್ಟೆಯಿಂದ ಮೆರವಣಿಗೆಯ ಮೂಲಕ ಶ್ರೀ ದೇವಿಯ ಸನ್ನಿಧಾನಕ್ಕೆ ಹೊರೆಕಾಣಿಕೆ ಹಾಗೂ
ಶ್ರೀ ದೇವಿಯ ಬಿಂಬ ಬರುವುದು.
ರಾತ್ರಿ ಗಂಟೆ 7:30 ರಿಂದ ರಾತ್ರಿ ಗಂಟೆ 8ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11:30ಕ್ಕೆಮಹಾಪೂಜೆ ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿಪೂಜಾ ಮಹೋತ್ಸವ ಜರಗಲಿದೆ.
ಮಾಚ್೯ 29, ಬುಧವಾರ ಬೆಳಿಗ್ಗೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ ಗಂಟೆ 3ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾಭಿಮಾನಿಗಳೆಲ್ಲರೂ ಈ ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಮಲ್ಲಾರು, ರಾಣ್ಯಕೇರಿ - ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.