ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳಪು : ಪಡುಬಿದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಹೋರಾಟ ಸಮಿತಿಯಿಂದ ಆಗ್ರಹ ; ಮನವಿ ಸಲ್ಲಿಕೆ

Posted On: 24-03-2023 07:08PM

ಬೆಳಪು : ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲು ನಿಲುಗಡೆಗೊಳಿಸುವಂತೆ ಆಗ್ರಹಿಸಿ ಮತ್ತು ರೈಲ್ವೆ ನಿಲ್ದಾಣದ ರಸ್ತೆಯನ್ನು ಬೆಳಪು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕುರಿತಂತೆ ಮಾಚ್೯ 24ರಂದು ಹೋರಾಟ ಸಮಿತಿ ಸೇರಿದಂತೆ ಎಂಟು ಗ್ರಾಮಗಳ ಜನರು ಪ್ರತಿಭಟನಾ ಸಭೆ ನಡೆಸಿ ರೈಲ್ವೆ ಅಧಿಕಾರಿ ಗಣಪತಿ ನಾಯಕ್ ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣ ಮೇಲ್ದರ್ಜೆ ಹೋರಾಟ ಸಮಿತಿ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿರುವ ರೈಲು ನಿಲ್ದಾಣಕ್ಕೆ ಪಡುಬಿದ್ರಿ ರೈಲು ನಿಲ್ದಾಣವೆಂದು ಹೆಸರಿಟ್ಟಿದ್ದಾರೆ. ಬೆಳಪು ಸುತ್ತ ಮುತ್ತ ಹಲವಾರು ಔದ್ಯೋಗಿಕ ಕೇಂದ್ರಗಳಿದ್ದು ಬೇರೆ ರಾಜ್ಯದ ಜನರಿಗೂ ಇದು ಅವಶ್ಯಕವಾದ ರೈಲು ನಿಲ್ದಾಣ. ಕಾಸರಗೋಡಿನಲ್ಲಿ ಪ್ರತಿ ನಿಲ್ದಾಣದಲ್ಲಿಯೂ ರೈಲು ನಿಲುಗಡೆ ಇದೆ ನಮ್ಮಲ್ಲಿ ಯಾಕಿಲ್ಲ. ಸುಮಾರು ವರ್ಷಗಳಿಂದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಮನವಿಗೆ ಒಂದು ತಿಂಗಳೊಳಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ರೈಲು ರೋಖೋ ಅನಿವಾರ್ಯ ಎಂದರು.

ಈ ಸಂದರ್ಭ ಬೆಳಪು, ಉಚ್ಚಿಲ, ಮಲ್ಲಾರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ ಸದಸ್ಯರು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.