ಉದ್ಯಾವರ : ನಿರಂತರ್ ಉದ್ಯಾವರ ಮತ್ತು ಪೊಯೆಟಿಕಾ ಮಂಗಳೂರು ಇವರ ನೇತೃತ್ವದಲ್ಲಿ ಪೊಯೆಟಿಕಾ ಕವಿಗೋಷ್ಠಿ 16 ಮಾರ್ಚ್ 26, ಆದಿತ್ಯವಾರ ಸಂಜೆ 4 ಗಂಟೆಗೆ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಡಿವೈನ್ ಗ್ಲೋರಿ ರೋಷನ್ ಕ್ರಾಸ್ಟೋ ಅವರ ನಿವಾಸದಲ್ಲಿ ಜರುಗಲಿದೆ.
ಕಳೆದ ಐದು ವರ್ಷಗಳಲ್ಲಿ ವಿವಿಧ ತಂಡಗಳ 30 ಬಹುಭಾಷಾ ನಾಟಕಗಳನ್ನು ಉದ್ಯಾವರದಲ್ಲಿ ಪ್ರದರ್ಶನ ಮಾಡುವಲ್ಲಿ ನೇತೃತ್ವ ವಹಿಸಿದ ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವಂತ ಈ ಕವಿಗೋಷ್ಠಿಯಲ್ಲಿ, ಪ್ರತಿಷ್ಠಿತ ಪೊಯೆಟಿಕಾ ಕವಿ ತಂಡ ಸಹಭಾಗಿತ್ವ ವಹಿಸಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕೊಂಕಣಿ ಕವಿಗಳು ಭಾಗವಹಿಸುತ್ತಿರುವ ಈ ಕವಿಗೋಷ್ಠಿಯಲ್ಲಿ, ದೂರದ ಗೋವಾ ರಾಜ್ಯದಿಂದಲೂ ಕವಿಗಳು ಆಗಮಿಸುತ್ತಿರುವುದು ವಿಶೇಷ. 30 ಮಂದಿ ಯುವ ಮತ್ತು ಅನುಭವಿ ಕವಿಗಳು ತಮ್ಮ ಕವಿತೆಯನ್ನು ಕವಿಗೋಷ್ಠಿಯಲ್ಲಿ ಸಾದರಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರ ಪ್ರಕಟಣೆ ತಿಳಿಸಿದೆ.