ಮಾಚ್೯26 - ಎಪ್ರಿಲ್ 2 : ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ವಾರ್ಷಿಕ ನೇಮೋತ್ಸವ
Posted On:
26-03-2023 05:51PM
ಎರ್ಮಾಳು : ಸಂದು ದಾಂತಿ ಗರಡಿ ಎಂದೇ ಪ್ರಸಿದ್ಧಿ
ಪಡೆದಿರುವ ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಾಚ್೯ 26ರಿಂದ ಎಪ್ರಿಲ್ 2ರ ವರೆಗೆ ನವೀಕೃತ ನಿರ್ಮಾಣಗಳ ಸಮರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಹಾ ಅನ್ನಸಂತರ್ಪಣೆ ಮತ್ತು ವಾರ್ಷಿಕ ನೇಮೋತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ವೇದ ಮೂರ್ತಿ ಗಣಪತಿ ಭಟ್ ಎರ್ಮಾಳು ಅವರ ನೇತೃತ್ವದಲ್ಲಿ ನಡೆಯಲಿದೆ.
ಮಾಚ್೯ 26ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಸಂಜೆ
4.30ರಿಂದ ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪೂಜೆ, ಸಪ್ತ ಶುದ್ಧಿ, ರಕ್ಷೋಭ್ಯ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ, ಪ್ರಾಕಾರ ಬಲಿ ಸೇವೆಗಳು ನಡೆಯಲಿದೆ.
ಮಾಚ್೯ 27ರಂದು ಬೆಳಿಗ್ಗೆ 6.30 ರಿಂದ ಗಣಹೋಮ, ಕಲಶಾಧಿವಾಸ ಹೋಮ, ದುರ್ಗಾ ಹೋಮ, 8 ಗಂಟೆಯಿಂದ ನಾಗಬನದಲ್ಲಿ ತನು ತಂಬಿಲ ಸೇವೆ ಮತ್ತು ಆಶ್ಲೇಷ ಬಲಿ, ಬೆಳಗ್ಗೆ 10.10ಕ್ಕೆ ವೃಷಭ ಲಗ್ನದಲ್ಲಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕುಂಭಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8.30ರಿಂದ ಗರಡಿ ಪ್ರವೇಶ ನಡೆಯಲಿದೆ.
ಮಾಚ್೯ 28 ರಂದು ರಾತ್ರಿ 7.30ಕ್ಕೆ ಅಗೇಲು ಸೇವೆ ನಡೆಯಲಿದೆ. ಮಾಚ್೯ 29 ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 11.50ಕ್ಕೆ ಶ್ರೀ ಬೈದರ್ಕಳರ ದರ್ಶನ ನಡೆಯಲಿದೆ. ಮಾಚ್೯ 30ರ ಸಂಜೆ 4 ಗಂಟೆಗೆ ಮಾಯಂದಲ ಕೋಲ, ರಾತ್ರಿ 9ಕ್ಕೆ ಪಿಲಿಚಂಡಿ ಕೋಲ ನಡೆಯಲಿದೆ. ಎಪ್ರಿಲ್ 2ರಂದು ಎರ್ಮಾಳು ಎಲ್ಲದಡಿ ಮನೆಯವರಿಂದ ಶುದ್ಧದ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.