ಕಳೆದ ಬಾರಿ ಬಿಜೆಪಿಯ ಪ್ರಚಾರದಿಂದ ಸೋಲು ಈ ಬಾರಿ ಜನರು ಅಪಪ್ರಚಾರ ನಂಬುತ್ತಿಲ್ಲ : ವಿನಯ್ ಕುಮಾರ್ ಸೊರಕೆ
Posted On:
27-03-2023 06:23PM
ಕಾಪು : ಕಾಂಗ್ರೆಸ್ ಪಕ್ಷ ಎಪಿಎಲ್ ಬಿಪಿಎಲ್ ಎನ್ನದೆ ಹೊಸ ಆಶ್ವಾಸನೆ ಎಲ್ಲರಿಗೂ ನೀಡಲು ಸಿದ್ಧವಿದೆ. ವರ್ಷಕ್ಕೆ ರೂ. 48,000 ಪ್ರಯೋಜನ ನೀಡಲಿದ್ದೇವೆ. ಚುನಾವಣೆ ಘೋಷಣೆ ಪ್ರಾರಂಭವಾದ ನಂತರ ಚುನಾವಣಾ ಪ್ರಚಾರ ಮಾಡಲಿದ್ದೇವೆ. ಬೂತ್ ಮಟ್ಟದಲ್ಲಿ ಪ್ರತಿ ಮನೆಯನ್ನು ತಲುಪಲು ನಮ್ಮ ಕಾರ್ಯಕರ್ತರು ತಯಾರಾಗಿದ್ದಾರೆ. ವಿರೋಧ ಪಕ್ಷದ ಅಪಪ್ರಚಾರದಿಂದ ನಮ್ಮ ಪಕ್ಷಕ್ಕೆ ತೊಡಕಾಗಿತ್ತು. ಈ ಸಲ ಯಾವುದೇ ಅಪಚಾರ ಜನ ನಂಬುತ್ತಿಲ್ಲ
ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಪು ತಾಲೂಕಿನ 29 ಪಂಚಾಯತಿಗಳಲ್ಲಿ ಹಿರಿಯ ಕಾಂಗ್ರೆಸ್ಸಿಗರಿಗೆ ಉಸ್ತುವಾರಿ ನೀಡಿದ್ದೇವೆ. ಎಂಎಲ್ಎ, ಎಂಪಿ ಚುನಾವಣೆಗಳಲ್ಲಿ ಎಸ್ಡಿಪಿಐ ಪ್ರಭಾವ ಬೀರದು. ಕಳೆದ ಸಲ ಮೋದಿಗೆ ಒಂದು ಓಟು ನೀಡಿ ಎಂದಿದ್ದರು. ಮತದಾರರಿಗೆ ತಿಳಿದಿದೆ ಈ ಚುನಾವಣೆ ಮೋದಿಯವರ ಚುನಾವಣೆ ಅಲ್ಲ ಎಂದು. ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಜನರಿಗೆ ತಿಳಿದಿದೆ. ಕಾಪುವಿಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡಿದ್ದು ಕಾಂಗ್ರೆಸ್. ಈಗಿನ ಬಿಜೆಪಿ ಶಾಸಕರು ನಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಕಾಪುವಿಗೆ ಬೇಕಾದಂತಹ 100 ಬೆಡ್ ಹಾಸ್ಪಿಟಲ್, ಸರ್ಕಾರಿ ಕಚೇರಿಗಳ ಕಾಂಪ್ಲೆಕ್ಸ್, ಎಲ್ಲಾ ಗ್ರಾಮಗಳನ್ನು ಸಂಪರ್ಕಿಸುವಂತಹ ಬಸ್ ನಿಲ್ದಾಣ ಮುಂತಾದ ಹಲವು ಯೋಜನೆಗಳನ್ನು ಮಾಡಲಿದ್ದೇವೆ.
ಕಳೆದ ಬಾರಿ ನನ್ನ ಕೊನೆಯ ಚುನಾವಣೆಯೆಂದು ನಿರ್ಧರಿಸಿದ್ದೆ ಸೋಲಾಯಿತು. ಐದು ವರ್ಷ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕದಿಂದಾಗಿ ಮತ್ತೊಮ್ಮೆ ಸರ್ವಾನುಮತದಿಂದ ಅಭ್ಯರ್ಥಿಯಾದೆ. ಸೋಲಿಸಿ ನಿವೃತ್ತಿ ಮಾಡಬೇಡಿ ಜನಸೇವೆ ಮಾಡಲು 5 ವರ್ಷ ಅವಕಾಶ ನೀಡಿ ಎಂದು ಜನರಲ್ಲಿ ವಿನಂತಿ ಮಾಡುತ್ತೇನೆ. ಬಿಜೆಪಿಯಲ್ಲಿದ್ದಂತೆ ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಾಧಿಕಾರ ಬೇಡವೆಂದವರು ಈಗ ಪ್ರಾಧಿಕಾರ ಎಲ್ಲಾ ಕಡೆ ಇರಬೇಕೆಂದು ಹೇಳುತ್ತಿದ್ದಾರೆ. ಸಮಸ್ಯೆ ಬಗ್ಗೆ ಹರಿಸದೆ, ಮಾಸ್ಟರ್ ಪ್ಲಾನ್ ಮಾಡಲಾಗಲಿಲ್ಲ. ಬಿಜೆಪಿ ಈಗ ಎಲ್ಲವನ್ನು ಘೋಷಣೆ ಮಾಡುತ್ತಿದೆ. ಕಳೆದ ಬಾರಿ ಬಿಲ್ಲವಕೋಶಕ್ಕೆ ಈ ಬಾರಿ ನಿಗಮ ಮಾಡಿದರೂ ಅನುದಾನ ಘೋಷಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಸಮಾಜದ ವಿವಿಧ ಜಾತಿಗಳ ನಿಗಮಗಳನ್ನು ಸ್ಥಾಪಿಸುವ ಯೋಚನೆ ಇದೆ ಎಂದರು.