ನಂದಿಕೂರು : ಆಚಾರ್ಯಪುರುಷ , ಯಕ್ಷಕಲಾ ಕುಸುಮ - ಗೌರವಾರ್ಪಣೆ, ಸಮ್ಮಾನ
Posted On:
13-04-2023 03:32PM
ನಂದಿಕೂರು : ಇಲ್ಲಿಯ ಭಾಗವತ ಪ್ರತಿಷ್ಠಾನದ
ಇಪ್ಪತ್ತಮೂರನೇ ವರ್ಷದ ಸಮ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮವೂ 'ಮೋಹನ ರಾವ್ - ಜಯಲಕ್ಷ್ಮೀ ರಾವ್' ಸಂಸ್ಮರಣೆಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಭಾರತೀಯ ಋಷಿ ಪರಂಪರೆಯ ಸಾಂಸ್ಕೃತಿಕ ಆವರಣವನ್ನು ಮತ್ತೆ ಸ್ಥಾಪಿಸಿದ ನಾಲ್ಕು ವೇದ,ವೇದಾಂತ,
ತರ್ಕ,ವ್ಯಾಕರಣ,ಪೌರೋಹಿತ್ಯ ,ಧರ್ಮಶಾಸ್ತ್ತಗಳಲ್ಲಿ ಉತ್ತೀರ್ಣರಾಗಿ ಭಾಗವತ,ಮಹಾಭಾರತ ಗ್ರಂಥಗಳನ್ನು ಅಧ್ಯಯನ ಮಾಡಿರುವ , ಶ್ರೀ ವಿದ್ಯಾಮಾನ್ಯರ್ತಿರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಜಿಲ್ಲೆಯ ಪ್ರಸಿದ್ಧ ವೈದಿಕ ವಿದ್ವಾಂಸರಿಂದ ಪಾಠಕೇಳಿದ, ಗುರುಮನೆ ಸ್ಥಾಪಿಸಿ ನಿಜ ಅರ್ಥದ ಗುರುವಾದ ವೇ.ಮೂ. ಪ.ಸು.ಲಕ್ಷ್ಮೀಶ ಆಚಾರ್ಯ ಅವರನ್ನು "ಆಚಾರ್ಯಪುರುಷ" ಎಂಬ ಉಪಾದಿಯೊಂದಿಗೆ ಗೌರವಿಸಲಾಯಿತು.
ಹವ್ಯಾಸಿ ಯಕ್ಷಗಾನ ಕಲಾವಿದ, ಕಲಾಪೋಷಕ, ಸಮಾಜ ಸೇವಕರಾಗಿ ಗುರುತಿಸಿಕೊಂಡು ಕರ್ನಿರೆಯಲ್ಲಿ ಯಕ್ಷಗುರುಗಳಾದ ಪು.ಶ್ರೀನಿವಾಸ ಭಟ್ಟ ಕಟೀಲು ಹಾಗೂ ಪುಚ್ಚೆಕೆರೆ ಕೃಷ್ಣ ಭಟ್ ಅವರ ಸಾರಥ್ಯದಲ್ಲಿ ಸಂಪನ್ನಗೊಂಡ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ತರಬೇತಿ ಪಡೆದು ಹಿಮ್ಮೇಳ, ನಾಟ್ಯ,ಅರ್ಥಗಾರಿಕೆಯ ಅಭ್ಯಾಸಮಾಡಿರುವ , ಸಂಘ ಸಂಸ್ಥೆಗಳ ಆಟ - ಕೂಟಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಶೈಲಿಯೊಂದಿಗೆ ಜನಪ್ರಿಯರಾಗಿದ್ದ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಅವರನ್ನು "ಯಕ್ಷಕಲಾ ಕುಸುಮ" ಎಂಬ ಉಪಾದಿಯೊಂದಿಗೆ ಸಮ್ಮಾನಿಸಲಾಯಿತು.
ಚತುರ್ವೇದಿ,ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವೇ.ಮೂ.ಪ್ರಭಾಕರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ನಂದಿಕೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧ್ವರಾಯ ಭಟ್ ಶುಭಹಾರೈಸಿದರು. ವೇ.ಮೂ.ವೆಂಕಟೇಶ ಪುರಾಣಿಕ ಅವರು ಆಶೀರ್ವದಿಸಿದರು. ನಿವೃತ್ತ
ಉಪನ್ಯಾಸಕ, ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ ವೈ.ರಾಮಕೃಷ್ಣ ರಾವ್,
ಪತ್ರಕರ್ತ ರಾಮಚಂದ್ರ ಆಚಾರ್ಯ,ವಿಶ್ವನಾಥ ಶೆಟ್ಟಿ ಕರ್ನಿರೆ, ಎ .ಪಿ. ಜೆನ್ನಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.
ಭಾಗವತ ಪ್ರತಿಷ್ಠಾನದ ನಾಗರಾಜ ರಾವ್ ಸ್ವಾಗತಿಸಿ, ವಂದಿಸಿದರು.ರಾಧಾಕೃಷ್ಣ ರಾವ್,
ರಾಘವೇಂದ್ರ ರಾವ್, ಹರಿಕೃಷ್ಣ ರಾವ್, ಶೀಕಾಂತ ರಾವ್, ಅನುಪಮಾ ಪ್ರಭಾಕರ ಅಡಿಗ, ಅಮೃತಾ ಹರಿಕೃಷ್ಣ ರಾವ್ ಪಾಲ್ಗೊಂಡಿದ್ದರು. ವಿಜಯ ಶೆಟ್ಟಿ ಕೊಳಚೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗುರುದಕ್ಷಿಣೆ ತಾಳಮದ್ದಳೆ ನಡೆಯಿತು.