ಕಾಪು : ಜೆಡಿಎಸ್ ಅಭ್ಯರ್ಥಿ ಸಬೀನಾ ಸಮದ್ ನಾಮಪತ್ರ ಸಲ್ಲಿಕೆ
Posted On:
19-04-2023 02:33PM
ಕಾಪು : ನಮ್ಮ ಅಭ್ಯರ್ಥಿಯ ಗೆಲುವಿಗೆ ಪಕ್ಷವು ಶ್ರಮಿಸಲಿದ್ದು. ಉತ್ತಮ ಯೋಜನೆಗಳನ್ನು ಕಾಪು ತಾಲೂಕಿಗೆ ನೀಡಲಿದ್ದೇವೆ. ಈ ಬಾರಿ ಕಾಪು ವಿಧಾನ ಸಭಾಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮಹಿಳೆಗೆ ಸ್ಥಾನ ನೀಡಿದೆ. ಸಮಾಜ ಸೇವೆ ಮಾಡುತ್ತಿರುವ ಸಬೀನ ಸಮದ್ ರಿಗೆ ನಮ್ಮ ಪಕ್ಷವು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಹೇಳಿದರು.
ಅವರು ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಪುವಿನಲ್ಲಿ ಅಗ್ನಿಶಾಮಕ ದಳ ನಿರ್ಮಾಣ, ಪರಿಸರ ಸ್ನೇಹಿ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಯೋಜನೆಗಳಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸುವಲ್ಲಿ ಬದ್ಧರಿದ್ದೇವೆ ಎಂದರು.
ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.