ಕಾಪು : ಪಕ್ಷೇತರ ಅಭ್ಯರ್ಥಿಯಾದ ಅಬ್ದುಲ್ ರಹಿಮಾನ್ ಯಾನೆ ಆಸೀಫ್ ಹನನ್ ನಾಮಪತ್ರ ಹಿಂತೆಗೆದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮತ್ತು ಪಕ್ಷದ ಮುಖಂಡರ ಸಮ್ಮುಖ ಕಾಪುವಿನಲ್ಲಿ ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಆಸೀಫ್ ಹನನ್ ಜೊತೆಗೆ ಶೇಖ್ ಸೈಯದ್ ಅಹ್ಮದ್, ಇಬ್ರಾಹಿಂ ಅವರನ್ನು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನವೀನಚಂದ್ರ ಸುವರ್ಣ , ಶರ್ಫುದ್ದೀನ್ ಶೇಖ್, ರಾಜಶೇಖರ ಕೋಟ್ಯಾನ್, ದಿನೇಶ್ ಕೋಟ್ಯಾನ್, ಇಮ್ರಾನ್ ಮಜೂರು, ಫಾರೂಕ್ ಚಂದ್ರ ನಗರ, ಉಸ್ಮಾನ್ ಕಾಪು, ರಮೀಝ್ ಪಡುಬಿದ್ರಿ, ಹಮೀದ್ ಮುಳೂರು, ಆಸೀಫ್ ಮೂಳೂರು, ರಹೀಂ ಮಲ್ಲಾರು ಉಪಸ್ಥಿತರಿದ್ದರು.