ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹೆಜಮಾಡಿ ಮತ್ತು ಪಡುಬಿದ್ರಿ : ಬಿಜೆಪಿ ಕಾರ್ಯಕರ್ತರ ಸಭೆ ; ಮನೆ ಮನೆ ಪ್ರಚಾರ

Posted On: 24-04-2023 08:28PM

ಹೆಜಮಾಡಿ : ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಲಾಲಾಜಿ ಆರ್ ಮೆಂಡನ್, ಪಕ್ಷದ ಕಾರ್ಯಕರ್ತರು ಜೊತೆಯಾಗಿ ಹೆಜಮಾಡಿ‌ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಭರ್ಜರಿ‌ ಪ್ರಚಾರ ನಡೆಸಿ ಮತಯಾಚಿಸಿದರು.

ಮೊದಲು ಹೆಜಮಾಡಿ‌‌ ಶ್ರೀ ಧೂಮಾವತಿ ದೈವಸ್ಥಾನ ಬಸ್ತಿಪಡ್ಪು ಇಲ್ಲಿಗೆ ಭೇಟಿ ನೀಡಿ ದೈವದ ಆಶೀರ್ವಾದ ಪಡೆದು ಕಾರ್ಯಕರ್ತರ ಸಭೆಯ ಬಳಿಕ ವಿವಿದೆಡೆ ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗ್ರಾಮ ಪಂಚಾಯತ್ ಅಧ್ಯಕ್ಷ ಪಾಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರ ಗಿರೀಶ್ , ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖರಾದ ಮಿಥುನ್ ಹೆಗ್ಡೆ, ಶರಣ್ ಹೆಜಮಾಡಿ, ಶಿವಕುಮಾರ್, ಮೋಹನ್ ಸುವರ್ಣ, ಲೀಲೇಶ್ ಸುವರ್ಣ, ಬಬಿತ, ಪ್ರಸಾದ್ ಹೆಜಮಾಡಿ, ನಿತಿನ್ ಹೆಜಮಾಡಿ, ಚಂದ್ರಶೇಖರ, ಅನಿಲ್, ರವೀಂದ್ರ ಹೆಜಮಾಡಿ ಹಾಗೂ ಪಕ್ಷದ ಹಿರಿಯರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.