ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳರು ; ಬಟ್ಟೆ, ನಗದು ಕಳವು

Posted On: 26-04-2023 06:22PM

ಪಡುಬಿದ್ರಿ : ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ, ನಗದು ಕಳವುಗೈದ ಪ್ರಕರಣ ನಡೆದಿದ್ದು ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌‌ನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿದ ಕಳ್ಳರು 2,83,500 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಮತ್ತು ರೂ. 2 ಸಾವಿರ ನಗದನ್ನು ಕದ್ದು ಒಯ್ದಿದ್ದಾರೆ.

ಈ ಬಗ್ಗೆ ಬಟ್ಟೆ ಅಂಗಡಿ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.