ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ : ಬಿಜೆಪಿಯ ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ - ರಾಹುಲ್ ಗಾಂಧಿ

Posted On: 27-04-2023 06:52PM

ಉಚ್ಚಿಲ : ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರ ಖರೀದಿ ಬಿಜೆಪಿಯಲ್ಲಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ 2ಸಾವಿರ ಕೋಟಿ ನೀಡಬೇಕಾಗಿದೆ. ಇತ್ತೀಚೆಗೆ ಕಂಟ್ರ್ಯಾಕ್ಟರ್ ಗಳು ಕರ್ನಾಟಕದ ಬಿಜೆಪಿ ಪಕ್ಷದ 40% ಕಮಿಷನ್ ಗೆ ಬೇಸತ್ತು ಪ್ರಧಾನಮಂತ್ರಿ ಗೆ ಪತ್ರ ಬರೆದಿದ್ದಾರೆ. ಧಾರ್ಮಿಕ ಮಠದಲ್ಲಿಯೂ 30% ಕಮೀಷನ್ ಇರುವುದು ದುರಂತ. ಪೋಲಿಸ್ , ಪ್ರಾಧ್ಯಾಪಕ, ಇಂಜಿನಿಯರಿಂಗ್ ನೇಮಕಾತಿ ಯಲ್ಲಿಯೂ 40% ಕಮಿಷನ್ ಇದೆ. ಈ ಹಣ ಎಲ್ಲಿ ಹೋಗುತ್ತದೆ ಅಂತ ನಾವು ಯೋಚಿಸಬೇಕಿದೆ ಎಂದು ಕಾಂಗ್ರೆಸ್ ಯುವ ನಾಯಕ ‌ರಾಹುಲ್ ಗಾಂಧಿ ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಭವನದಲ್ಲಿ ಮೀನುಗಾರರೊಂದಿಗೆ ನಡೆದ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು.

ಬಡವರು ಮತ್ತು ಶ್ರೀಮಂತ ಮೀನುಗಾರರೆಂಬ ವ್ಯತ್ಯಾಸ ದೂರಮಾಡಬೇಕಾಗಿದೆ. ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ. ಬಡವರಿಗೆ ಬಾರಿ ನಷ್ಟ ಉಂಟಾದರೆ ಶ್ರೀಮಂತರಿಗೆ ತೊಂದರೆಯಾಗದು. 4 ಗ್ಯಾರಂಟಿ ಸ್ಕೀಮ್ ಕಾಂಗ್ರೆಸ್ ಜಾರಿಗೊಳಿಸಿದೆ ಸರಕಾರ ಬಂದ 1 ಗಂಟೆಯಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ. ಮಾತೆಯರಿಗಾಗಿ ಯೋಜನೆಗಳಿವೆ. ಸರಕಾರ ಕೋಟ್ಯಾಂತರ ಹಣ ಡೀಸೆಲ್‌ , ಪೆಟ್ರೋಲ್ ಮೂಲಕ ಗಳಿಸಿದೆ. ನಮ್ಮ ಸರಕಾರದಲ್ಲಿ ಸುಳ್ಳು ಭರವಸೆ ನೀಡಲಾರೆವು. ದೇಶದ ಜನಗಣತಿಯ ಮೂಲಕ ಸಮುದಾಯದ ಬಗ್ಗೆ ತಿಳಿಯಬಹುದು ಎಂದರು.

ಮೀನುಗಾರರೊಂದಿಗೆ ಸಂವಾದ : ಡ್ರೆಜ್ಜಿಂಗ್ ಸಮಸ್ಯೆ, ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು, ಮೀನುಗಾರಿಕೆ ಸಂದರ್ಭ ತುರ್ತುಸೇವೆಗಾಗಿ ಸೀ ಅಂಬುಲೆನ್ಸ್ ಸೇವೆ, ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೀಸಲಾತಿ ಇತ್ಯಾದಿಗಳ ಬಗ್ಗೆ ಸಂವಾದ ನಡೆಯಿತು. ನಮ್ಮ ಸರಕಾರ ಮೀನುಗಾರರಿಗಾಗಿ ಹತ್ತು ಲಕ್ಷದ ಇನ್ಶೂರೆನ್ಸ್, ಮಹಿಳೆಯರಿಗೆ 1 ಲಕ್ಷದ ಬಡ್ಡಿರಹಿತ ಸಾಲ ನೀಡುವ ಯೋಜನೆಯಿದೆ. 25 ರೂಪಾಯಿ ಸಬ್ಸಿಡಿಯೊಂದಿಗೆ ಪ್ರತಿದಿನ 500 ಲೀಟರ್ ಡೀಸೆಲ್ ನೀಡಲಾಗುವುದು ಎಂದರು.

ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ಕಾಂಚನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಮಂಜುನಾಥ ಸುಣೇಗಾರ್, ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಚಂದ್ರ, ದೀಪಕ್ ಕೋಟ್ಯಾನ್, ವಿಶ್ವಾಸ್ ಅಮೀನ್, ಗೀತಾ ವಾಗ್ಳೆ, ಲಾವಣ್ಯ ಬಲ್ಲಾಳ್, ಸಂತೋಷ್ ಕುಲಾಲ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ವೆರೋನಿಕಾ ಕರ್ನಾಲಿಯೋ, ಗಫೂರ್, ಜಿತೇಂದ್ರ ಫುಟಾರ್ಡೋ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಂಜುನಾಥ ಪೂಜಾರಿ, ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.