ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಂಗ್ರೆಸ್ ಪಕ್ಷ ಬಡ, ಮಧ್ಯಮ ವರ್ಗದವರಿಗಾಗಿ ಇರುವ ಪಕ್ಷ : ವಿನಯ್ ಕುಮಾರ್ ಸೊರಕೆ

Posted On: 28-04-2023 02:37PM

ಉಡುಪಿ: ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವೆ ಸಂಘರ್ಷದಿಂದ ಬಡ ಮಧ್ಯಮ ವರ್ಗದ ರಕ್ತವನ್ನು‌ ಹೀರುವ ಕೆಲಸವನ್ನು‌ ಬಿಜೆಪಿ ಮಾಡಿದೆ ಎಂದು ಕಾಪು ತಾಲೂಕಿನ ಮಣಿಪುರ ದೆಂದೂರು ಭಾಗದಲ್ಲಿ ಮತಯಾಚನೆಯ ಸಂದರ್ಭ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಕಾಂಗ್ರೆಸ್ ಪಕ್ಷ ಬಡ ಮಧ್ಯಮ ವರ್ಗದ ಪಕ್ಷ. ಬಡ ಮಧ್ಯಮ ವರ್ಗದವರಿಗೆ ಬಹಳಷ್ಟು ಯೋಜನೆಗಳನ್ನು ತಂದಿದ್ದು ಅವೆಲ್ಲಾ ಯೋಜನೆಗಳು ನಿಂತು ಹೋಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಇನ್ನು‌ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಬಡ ಮಧ್ಯಮ ವರ್ಗಕ್ಕೆ ಆರ್ಥಿಕವಾಗಿ ಸದೃಢರಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬೆಂಬಲಿಸಬೇಕು ಎಂದು ಸೊರಕೆ ಹೇಳಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಶೆಟ್ಟಿ, ವಿನ್ಸೆಂಟ್, ಹಸನ್ ಶೇಖ್, ಡೆನ್ಸಿಲ್, ದೇವೆಂದ್ರ ಶೆಟ್ಟಿ, ಹಮೀದ್, ಅಬ್ದುಲ್ ಅಜೀದ್ ಮತ್ತಿತರರು ಉಪಸ್ಥಿತರಿದ್ದರು.