ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇನ್ನಂಜೆ : 45ನೇ ವಾರ್ಷಿಕ ಭಜನಾ ಮಂಗಳೋತ್ಸವ ಸಂಪನ್ನ
Posted On:
30-04-2023 06:04PM
ಕಾಪು : ಶ್ರೀ ದೇವಿ ಭಜನಾ ಮಂಡಳಿ (ರಿ.) ಮಂಡೇಡಿ ಇನ್ನಂಜೆ ಇದರ 45ನೇ ವಾರ್ಷಿಕ ಭಜನಾ ಮಂಗಳೋತ್ಸವವು ಎಪ್ರಿಲ್ 28 ರಂದು ನಡೆಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 10 ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯಿತು.
ಮಧ್ಯಾಹ್ನ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ಮತ್ತು ರಾತ್ರಿ ಘಂಟೆ 7:30ಕ್ಕೆ ಭಜನಾ ಮಂಗಳೋತ್ಸವ ಸಂಪನ್ನಗೊಂಡು, ಸ್ಥಳೀಯ ಮಕ್ಕಳಿಗೆ ನೃತ್ಯ ಕಾರ್ಯಕ್ರಮ, ಗಣ್ಯರಾದ ಕೊಡುಗೈ ದಾನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ದಯಾನಂದ ಶೆಟ್ಟಿ ದಂಪತಿ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸುತ್ತಿರುವ ದಯಾನಂದ ವಿಠ್ಠಲ ಶೆಟ್ಟಿ ದಂಪತಿ ಹಾಗೂ ಗ್ರಾಮದ ಹಿರಿಯರಾದ ಗೋಪಾಲ ಪೂಜಾರಿ, ಜಯ ಶೆಟ್ಟಿ, ಮುದ್ದು ಮುಖಾರಿ (ಪಾತ್ರಿ)ಯವರು ನೀಡಿರುವ ಸೇವೆಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಯಾನಂದ ಶೆಟ್ಟಿ "ಹರಿ ಕೀರ್ತನಾಶ್ರಮ" ಮಂಡೇಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿ.ಜಿ ಶೆಟ್ಟಿ ಮಂಡೇಡಿ, ಸಮಾಜರತ್ನ ಜಿ. ಲೀಲಾಧರ ಶೆಟ್ಟಿ, ಗೌರವ ಸಲಹೆಗಾರರಾದ ಜೀವನ್ ಪ್ರಕಾಶ್ ಶೆಟ್ಟಿ, ಗೌರವಾಧ್ಯಕ್ಷರಾದ ರಮೇಶ್ ಕೆ. ಶೆಟ್ಟಿ, ಶಿವರಾಮ ಜೆ. ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎಸ್.ಶೆಟ್ಟಿ, ಸಂತೋಷ್ ಎನ್. ಶೆಟ್ಟಿ ಮತ್ತು ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿರ್ಮಲ್ ಕುಮಾರ್ ಹೆಗ್ಡೆ ಹಾಗೂ ರೇಷ್ಮಾ ಸಿ. ಶೆಟ್ಟಿ ನಿರ್ವಹಿಸಿದರು, ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ಕೆ.ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು.
ನಂತರ ಕಿನ್ನಿಗೋಳಿ ಕಲಾವಿದರಿಂದ ತುಳು ಹಾಸ್ಯಮಯ ನಾಟಕ "ತೊಟ್ಟಿಲು" ಪ್ರದರ್ಶನಗೊಂಡಿತು.