ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಂಗ್ರೆಸ್ ನ 5 ವರ್ಷದ ಹಿಂದಿನ ಅಭಿವೃದ್ಧಿಯ ಪಟ್ಟಿಯನ್ನು ಮುಂದಿಟ್ಟು ಬಿಜೆಪಿ ಓಟು ಕೇಳುತ್ತಿದೆ : ವಿನಯ್ ಕುಮಾರ್ ಸೊರಕೆ

Posted On: 04-05-2023 12:13PM

ಕಾಪು : ನಾನು‌‌‌ ಶಾಸಕನಾಗಿದ್ದ ಅವಧಿಯಲ್ಲಿ 2013 ರಿಂದ 2018 ರಲ್ಲಿ‌ ನಡೆಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮತದಾರರ ಮುಂದೆ ಇಟ್ಟು ಬಿಜೆಪಿ ಓಟು ಕೇಳುತ್ತಿದೆ ಎಂದು ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಮತಯಾಚನೆ ಮಾಡಿ ಅವರು ಮಾತನಾಡಿದರು.

ಬಿಜೆಪಿ ಪಾರ್ಟಿಗೆ ಸ್ವಂತಿಕೆ ಅನ್ನೋದು ಇಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಶೇ.75 ಕಾಮಗಾರಿಗಳನ್ನು‌‌‌ ತಮ್ಮ ಕಾಲದ ಅಭಿವೃದ್ಧಿ ಅಂತಾ ಮತದಾರರ ಮುಂದೆ ಸುಳ್ಳು ಹೇಳಿ ಓಟು‌ ಕೇಳುವ ಗಿಮಿಕ್ ಮಾಡ್ತಾ ಇದೆ. ಈ ಬಾರಿ ಬಿಜೆಪಿ‌ಯ ಪ್ರಣಾಳಿಕೆ ಕಳೆದ ಬಾರಿಯ ನನ್ನ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾಂಗ್ರೆಸ್ ಪ್ರಣಾಳಿಕೆಯೇ ದಾರಿದೀಪವಾಗಿದೆಯೋ ಅಂತ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸೊರಕೆ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ, ರತನ್ ಶೆಟ್ಟಿ, ಮೆಲ್ವಿನ್ ಡಿಸೋಜ, ಹಸನಬ್ಬ ಶೇಖ್, ಜೆಸಿಂತಾ, ಲ್ಯಾನ್ಸಿ ಕರೋಡ ಮತ್ತಿತರರು ಉಪಸ್ಥಿತರಿದ್ದರು.