ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಪ್ರತೀ ಮನೆಗೆ ಒಂದು ಉದ್ಯೋಗ ಕೊಡುವ ಯೋಜನೆ : ವಿನಯ್ ಕುಮಾರ್ ಸೊರಕೆ
Posted On:
05-05-2023 01:22PM
ಉಡುಪಿ: ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಮನೆಗೊಬ್ಬರಿಗೆ ಉದ್ಯೋಗ ನೀಡುವ ಯೋಜನೆಯನ್ನು ನೀಡುವ ಮಹದಾಸೆಯನ್ನು ಹೊಂದಿದ್ದೇನೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಮಣಿಪಾಲ ಟೆಕ್ನಾಲಜಿ ಸಮೂಹ ಸಂಸ್ಥೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತಾಡಿದ ಅವರು ಕಾರ್ಮಿಕರೇ ಈ ದೇಶದ ನಿಜವಾದ ಸಂಪತ್ತು. ಇಡೀ ದೇಶದ ಸೆಕ್ಯೂರಿಟಿ ಕೀಲಿ ಇರೋದೇ ಕಾರ್ಮಿಕರ ಕೈಯಲ್ಲಿ. ಮಣಿಪಾಲದ ಗ್ರೂಪ್ ನ ತಾಂತ್ರಿಕ ಸಂಸ್ಥೆಗಳು ದೇಶದಲ್ಲಿ ಅಲ್ಲದೇ ಪ್ರಪಂಚದಾದ್ಯಂತ ಸುದ್ಧಿಯಲ್ಲಿದೆ. ಬಹಳಷ್ಟು ಮಂದಿಗೆ ಉದ್ಯೋಗ ವನ್ನು ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಕಾಪು ಕ್ಷೇತ್ರದಲ್ಲಿ ಕೂಡಾ ಮಣಿಪಾಲ ಸಮೂಹ ಸಂಸ್ಥೆಯಂತೆಯೇ ಸಣ್ಣ ಕೈಗಾರಿಕೆಯನ್ನು ಹುಟ್ಟು ಹಾಕಿ ಮನೆಗೊಂದು ಮಂದಿಗೆ ಉದ್ಯೋಗ ನೀಡುವ ಬೃಹತ್ ಯೋಜನೆಯನ್ನು ಮಾಡುವ ಕಾರ್ಯವನ್ನು ರೂಪಿಸುವ ಮಹದಾಸೆಯನ್ನು ಹೊಂದಿದ್ದೇನೆ. ಕಾಪು ಕ್ಷೇತ್ರಕ್ಕೆ ಐಡೆಂಟಿಟಿ ಇರಲಿಲ್ಲ. ಬೃಹತ್ ಕೈಗಾರಿಕೆಯಿಂದ ಜನಪಲ್ಲಟ ಆಗಿ ಮರುಭೂಮಿ ಆಗಿತ್ತು.
ಕಾಪು ತಾಲೂಕನ್ನು, ಪುರಸಭೆಯನ್ನು ಮಾಡಿ ಎಲ್ಲಾ ಸೌಕರ್ಯವನ್ನು ಒದಗಿಸುವ ಕೆಲಸವನ್ನು ಮಾಡಿದ್ದೇನೆ. ಕಾಪುವಿನ ಎಲ್ಲಾ ಗ್ರಾಮಕ್ಕೂ ನೇರ ಸಂಪರ್ಕವನ್ನು ಕೊಡುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಮೂಲಕ ಶೈಕ್ಷಣಿಕ ವಾಗಿ ಕಾಪು ಸ್ವಂತ ಕಾಲ ಮೇಲೆ ನಿಲ್ಲುವ ಯೋಜನೆಯನ್ನು ರೂಪಿಸಬೇಕಾಗಿದೆ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮಣಿಪಾಲ ಸಮೂಹ ಸಂಸ್ಥೆಯ ಯುನಿಟ್ 4 ರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸ, ನಿರ್ವಹಣಾ ವಿಭಾಗದ ವ್ಯವಸ್ಥಾಪಕ ಸತೀಶ್ ಪ್ರಭು, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಅಲೆವೂರು, ದೇವು ಪೂಜಾರಿ, ಸುಶಾಂತ್, ಸಂದೇಶ್, ಪ್ರಕಾಶ್ ಯತೀಶ್ ಕುಮಾರ್, ಜಲ್ಲೇಶ್ ಶೆಟ್ಟಿ ಉಪಸ್ಥಿತರಿದ್ದರು.