ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿ ಪೋಲಿಸ್ ವಶಕ್ಕೆ

Posted On: 07-05-2023 11:04AM

ಶಿರ್ವ : ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿಯನ್ನು ಶಿರ್ವ ಪೊಲೀಸ್‌ ಠಾಣಾಧಿಕಾರಿ ರಾಘವೇಂದ್ರ ಸಿ.ನೇತೃತ್ವದ ತಂಡ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಬಂಧಿತರನ್ನು ಇಕ್ಬಾಲ್‌ ಆಲಿಯಾಸ್‌ ಇಕ್ಬಾಲ್‌ ಶೇಖ್‌ ಆಲಿಯಾಸ್‌ ಇಕ್ಬಾಲ್‌ ಅಹಮದ್‌, ಪರ್ವೇಜ್‌, ಅಬ್ದುಲ್‌ ರಾಕಿಬ್‌, ಮೊಹಮ್ಮದ್‌ ಸಕ್ಲೇನ್‌, ಸಲೇಮ್‌ ಆಲಿಯಾಸ್‌ ಸಲೀಂ ಮತ್ತು ಅನಾಸ್‌ ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿದ್ದ ಡ್ರಾಗನ್‌ ಒಂದು, 2 ಮೆಣಸಿನ ಹುಡಿ ಪ್ಯಾಕೆಟ್‌, 3 ಮರದ ವಿಕೆಟ್‌, 3 ದ್ವಿಚಕ್ರ ವಾಹನ ಮತ್ತು 4 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ರೂ.2,31,000 ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.