ಕಾಪು : ಪುರಸಭಾ ವ್ಯಾಪ್ತಿಯ ಭಾರತ್ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆಯವರ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು.
ವಿನಯ್ ಕುಮಾರ್ ಸೊರಕೆಯವರು ಮತದಾರ ಬಾಂಧವರಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಮತ್ತು ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮತಯಾಚಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ ರವರು ಸೊರಕೆಯವರ ಸಾಧನೆಗಳ ಬಗ್ಗೆ ವಿವರಿಸಿ, ಮುಂದೆ ಶಾಸಕರಾಗಿ ಚುನಾಯಿತರಾದರೆ ಏನು ಮಾಡುತ್ತಾರೆ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿಸಿದರು.
ಪಕ್ಷದ ಪ್ರಮುಖರಾದ ಅಮೀರ್ ಮೊಹಮ್ಮದ್, ಹರೀಶ್ ನಾಯಕ್, ಸೌಮ್ಯ ಸಂಜೀವ, ಶೋಭಾ ಪಾಂಗಳ, ಲಕ್ಷ್ಮೀಶ ತಂತ್ರಿ, ಸಂಧ್ಯಾ ಬಾಲಕೃಷ್ಣ, ಹಬೀಬ್ ಖಾನ್, ಕೆ.ಎಂ. ರಝಕ್, ಶಂಶುದ್ದೀನ್, ರಜಾಬ್ ಉಮ್ಮರ್, ಮೋಹನ್ ದಾಸ್ ಶೆಣೈ, ಮೋಹಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.