ಶಿರ್ವ : ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿರ್ವ ಗ್ರಾಮದ ವೆರೋನಿಕ ಪಿಂಟೊ (77) ಮತದಾನಕ್ಕಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮತದಾನ ಮಾಡಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಮಗಳಿನೊಂದಿಗೆ ಕಾಪು ಕ್ಷೇತ್ರದ ಶಿರ್ವ ಗ್ರಾಮದ ಪಂಜಿಮಾರು ಕೋಡು ಶಾಲೆಯಲ್ಲಿ ಮತದಾನ ಮಾಡಿ ಎಲ್ಲರಿಗೂ ಸ್ಪೂರ್ತಿಯಾದರು.