ರಾಜ್ಯ ಸರ್ಕಾರ ಯಾರದೋ ಒತ್ತಾಯಕ್ಕೆ ಮಣಿದು, ಬಡ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲು ಹೊರಟಿರುವ ಶಿಕ್ಷಣ ಯಾವತ್ತೂ ವಿದ್ಯಾರ್ಥಿಗಳ ವಿಕಸನಕ್ಕೆ ಅಡಿಪಾಯವಾಗದು.ಅದೆಷ್ಟೋ ಮನೆಯಲ್ಲಿ ಉಣ್ಣಲು ಗತಿ ಇಲ್ಲದೆ ಇರುವ ಕಡೆಯಲ್ಲಿ ಮಕ್ಕಳು ಮೊಬೈಲ್ ಲ್ಯಾಪ್ಟಾಪ್ ಹಿಡಿದು ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ? ಮಳೆಗಾಲದಲ್ಲಿ ಕೆಲವು ಕಡೆ ಇಂಟರ್ನೆಟ್ ತೊಂದರೆ ಇವುಗಳನ್ನು ಅರಿಯದೆ, ಇವತ್ತು ಹೈಕೋರ್ಟ್ ಕೊಟ್ಟ ತೀರ್ಪು ಸಮಂಜಸವಲ್ಲ. ಯಾವುದೋ ವಿದ್ಯಾಸಂಸ್ಥೆಗಳ ಒತ್ತಡಕ್ಕೆ ಮಣಿದು ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ. ಈ ವಿಚಾರದ ಬಗ್ಗೆ ಇನ್ನೊಮ್ಮೆ ಚರ್ಚೆ ನಡೆಸಿ ಕೋರೋನ ಕಮ್ಮಿಯಾದ ಮೇಲೆ ಶಾಲೆಗಳನ್ನು ತೆರೆಯುವುದು ಒಳಿತು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಸರ್ಕಾರ ದಾರಿ ಮಾಡಿಕೊಟ್ಟಂತ್ತಾಗುತ್ತೆ. ಕೆಲವು ದಂಧೆಕೋರರ
ಹಣದ ಆಸೆಗೆ ಬಡ ಮಕ್ಕಳ ಜೀವನವನ್ನು ಬಲಿ ಕೊಡಬೇಡಿ.