ಶಿರ್ವ.10, ಜುಲೈ : ಕ್ವಾಲಿಟಿ ಕೋಳಿ ಫಾರ್ಮ ಹಿಂದುಗಡೆ ಶಿರ್ವ ಗ್ರಾಮದಲ್ಲಿ ವಾಸವಾಗಿದ್ದ ಯಲಪ್ಪ ಇವರ ಮಗಳಾದ ಸೌಭಾಗ್ಯ 18 ವರ್ಷ ಈಕೆಯು ದಿನಾಂಕ 08/07/2020 ರ ಬುಧವಾರ ಬೆಳಿಗ್ಗೆ 10:00 ಗಂಟೆಗೆ ಶಿರ್ವ ಗ್ರಾಮದ ಕ್ವಾಲಿಟಿ ಪೌಲ್ಟ್ರಿ ಫಾರ್ಮ್ ಎಂಬಲ್ಲಿರುವ ಬಾಡಿಗೆ ಮನೆಯಿಂದ ಭೂತಬೆಟ್ಟು ಎಂಬಲ್ಲಿರುವ ಸಬಾಸ್ಟಿನ್ ಬರ್ಬೋಜ ಎಂಬವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಅಲ್ಲಿಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ, ಎಂದು ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿರುತ್ತಾರೆ, ದೂರಿನ ಅನ್ವಯ ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಮನೆಯ ವಠಾರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ, ಸಮಾಜ ಸೇವಕ ಸೂರಿ ಶೆಟ್ಟಿ ಅವರು ಮೃತ ದೇಹವನ್ನು ಬಾವಿಯಿಂದ ಹೊರ ತೆಗೆಯಲು ಸಹಕರಿಸಿದರು.