ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿಯನ್ನು ಕಾಪು ಮಿನಿ ವಿಧಾನಸೌಧದ ಪ್ರಥಮ ಮಹಡಿಯಲ್ಲಿ ಬಿಜೆಪಿಯ ಹಿರಿಯ ಚೇತನ ಗುಜ್ಜಾಡಿ ಪ್ರಭಾಕರ್ ನಾಯಕ್ ಸೋಮವಾರ ಬೆಳಿಗ್ಗೆ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಈಗಾಗಲೇ ಬಿಜೆಪಿ ಪಕ್ಷವು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಯಾವ ಬೂತ್ ನಲ್ಲಿ ಕಡಿಮೆ ಮತ ಸಿಕ್ಕಿದೆಯೋ ಅಲ್ಲಿಗೆ ಹೋಗಿ ಮತ್ತೆ ಕೆಲಸ ಮಾಡಬೇಕಾಗಿದೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದ ಎಲ್ಲ ಜನರಿಗೂ ನಾನು ಶಾಸಕನಾಗಿದ್ದು ಎಲ್ಲರನ್ನೂ ಸಮಾನ ಭಾವದಿಂದ ನೋಡಿ ಕೆಲಸ ಮಾಡುತ್ತೇನೆ ಎಂದರು.
ಮೊದಲಿಗೆ ಶಾಸಕರ ಕಚೇರಿಯಲ್ಲಿ ಪೂಜಾವಿಧಿ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಉಡುಪಿ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಅಧ್ಯಕ್ಷ ಶ್ರೀಕಾಂತ ನಾಯಕ್ , ಕಾರ್ಯದರ್ಶಿ ಗೋಪಾಲ ಕೃಷ್ಣರಾವ್, ಶಿಲ್ಪ ಸುವರ್ಣ, ಅನಿಲ್ ಕುಮಾರ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್ ಶೆಟ್ಟಿ ಕಲ್ಯಾ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.