ಮಂಗಳೂರು : ಜೈ ತುಲುನಾಡ್ (ರಿ.) ಸಂಘಟನೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮೇ 28ರಂದು ಕೂಳೂರಿನ ಫಲ್ಗುಣಿ ಹಾಲ್ ನಲ್ಲಿ ನಡೆಯಿತು.
ಜೈ ತುಲುನಾಡ್ (ರಿ) ಸಂಘಟನೆಯ 2023-24ನೇ ಸಾಲಿನ ಕೇಂದ್ರಸಮಿತಿಯ ಅಧ್ಯಕ್ಷರಾಗಿ ವಿಶು ಶ್ರೀಕೇರ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ತುಲುವೆ ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಕಟಪಾಡಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರವೀಶ್ ಪಡುಮಲೆ, ಉದಯ್ ಪೂಂಜಾ ಮತ್ತು ಉಮೇಶ್ ಸಾಲ್ಯಾನ್, ಉಪ ಕಾರ್ಯದರ್ಶಿಯಾಗಿ ಪೂರ್ಣಿಮಾ ಬಂಟ್ವಾಳ ಮತ್ತು ರಾಜಶ್ರೀ ತಲಪಾಡಿ, ಉಪ ಕೋಶಾಧಿಕಾರಿಯಾಗಿ ಪೂರ್ಣಿಮಾ ಕಿರಣ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಹೆಬ್ರಿ, ಉಪಸಂಘಟನಾ ಕಾರ್ಯದರ್ಶಿಯಾಗಿ ಶೇಖರ್ ಗಂಗೆನೀರ್ ಮತ್ತು ರಾಜೇಶ್ ನೀರುಡೆ, ತುಲು ಲಿಪಿ ಸಮಿತಿಯ ಸಮಿತಿಯ ಸಂಚಾಲಕರಾಗಿ ಪ್ರಶಾಂತ್ ನಂದಲಿಕೆ, ಉಪ ಸಂಚಾಲಕರಾಗಿ ಅಕ್ಷತಾ ಇನ್ನಂಜೆ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾಗಿ ಸದಾಶಿವ ಮುದ್ರಾಡಿ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಸಂಚಾಲಕರಾಗಿ ಯತೀಶ್ ಮುಂಡೋಡಿ, ತುಲು ಭಾಷಾ ಸಮಿತಿಯ ಸಂಚಾಲಕರಾಗಿ ಜಯಪ್ರಸಾದ್ ಕೆದಿಲ, ಉಪ ಸಂಚಾಲಕರಾಗಿ ಅನುಷಾ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಜೈ ತುಲುನಾಡ್ (ರಿ ) ಸಂಘಟನೆಯ ಸ್ಥಾಪಕ ಸದಸ್ಯರು, 2022-23 ಸಾಲಿನ ಪದಾಧಿಕಾರಿಗಳು ಮತ್ತು ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
2022-23ನೇ ಸಾಲಿನ ವರದಿಯನ್ನು ರಾಜೇಶ್ ಉಪ್ಪೂರು, ಲೆಕ್ಕಾಚಾರದ ವರದಿಯನ್ನು ರಕ್ಷಿತ್ ಕೋಟ್ಯಾನ್ ಮಂಡಿಸಿದರು. ಕುಶಾಲಾಕ್ಷಿ ವಿ. ಕಣ್ವತೀರ್ಥ ಪ್ರಾರ್ಥಿಸಿದರು. ಶರತ್ ಕೊಡವೂರು ಸ್ವಾಗತ ಕೋರಿದರು ಮತ್ತು ಸುಮಂತ್ ಹೆಬ್ರಿ ಧನ್ಯವಾದ ಅರ್ಪಿಸಿದರು.
ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.