ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು - ದಶಮಾನೋತ್ಸವ, ವಿಶ್ವಕರ್ಮ ಪೂಜೆ ಸಂಪನ್ನ

Posted On: 02-06-2023 08:16PM

ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ಇದರ ದಶಮಾನೋತ್ಸವ ಮತ್ತು ವಿಶ್ವಕರ್ಮ ಪೂಜೆ ಮೇ 28ರಂದು ಕಡಂಬು ಮೈದಾನದಲ್ಲಿ ನಡೆಯಿತು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ದೀಪ ಬೆಳಗಿಸುವುದರ ಮೂಲಕ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ ಕೊಟ್ಟರು.

ಸುಮಾರು 5 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ. ಸ್ಥಳೀಯ ಪ್ರತಿಭೆಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಂಶ ತಂಡ ಕಾಪು ಇವರಿಂದ ಬಲೆ ತೆಲಿಪಲೆ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷರಾದ ಚೇತನ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳ ಪ್ರಮುಖರಾದ ಜಯಪ್ರಕಾಶ್ ಪ್ರಭು, ಮಾಜಿ ಶಾಸಕರು ಲಾಲಾಜಿ ಮೆಂಡನ್, ಸಂಘದ ಗೌರವ ಅಧ್ಯಕ್ಷರಾದ ಗೋಪಾಲ ಆಚಾರ್ಯ ಮತ್ತು ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷರಾದ ಚೈತ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಜುನಾಥ್ ಆಚಾರ್ಯ ಮೂಡು ಮಟ್ಟಾರು ಪ್ರಸ್ತವಿಕ ನುಡಿಗಳನ್ನಿತ್ತು, ಸಂಘದ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ದೀಪಕ್ ಆಚಾರ್ಯ ವಂದಿಸಿದರು. ದಾಮೋದರ್ ಶರ್ಮ ಕಾರ್ಯಕ್ರಮನ್ನು ನೀರೂಪಿದರು.