71 ನೇ ಗಣರಾಜ್ಯೋತ್ಸವದ ಅಂಗವಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ತಾರೀಕು 03/02/2020 ರಂದು 15 ಕುರ್ಚಿಯನ್ನು ಅಪ್ಪ ಅಮ್ಮ ಅನಾಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು..
ಈ ಸಂದರ್ಭದಲ್ಲಿ ಅಪ್ಪ ಅಮ್ಮ ಅನಾಥಾಲಯ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಕೂರಾಡಿ ಇವರು ಬಿರುವೆರ್ ಕಾಪು ಸೇವಾ ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗೆ ಪ್ರಸಂಶೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಶಿರ್ವ ಇದರ ಕಾರ್ಯದರ್ಶಿ ಸುಜನ್ ಎಲ್ ಸುವರ್ಣ ಕುತ್ಯಾರು ಇವರು ಮಕ್ಕಳಿಂದ ಹಾಗೂ ಇನ್ನಿತರ ಕಾರಣದಿಂದ ತಿರಸ್ಕರಿಸಲ್ಪಟ್ಟ ಹಕ್ಕು ವಂಚಿತ ತಂದೆ ತಾಯಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೀವು ನೀಡುತ್ತಿರುವ ಸೇವೆ ಅವಿಸ್ಮರಣೀಯ ಎಂದು ಸಂಸ್ಥೆಗೆ ಶುಭ ಹಾರೈಸಿದರು, ಅತಿಥ್ ಸುವರ್ಣ ಪಾಲಮೆ, ಮನೋಹರ್ ಕಲ್ಲುಗುಡ್ಡೆ, ಅನಿಲ್ ಅಮಿನ್ ಕಾಪು, ಕಾರ್ತಿಕ್ ಅಮಿನ್ ಕಲ್ಲುಗುಡ್ಡೆ ಮತ್ತು ವಿಕ್ಕಿ ಪೂಜಾರಿ ಮಡುಂಬು ಉಪಸ್ಥಿತರಿದ್ದರು..
ನಮ್ಮ ಕಾಪು