ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಭರವಸೆ ನೀಡಿದ‌ 5 ಗ್ಯಾರಂಟಿ ಜಾರಿಗೆ ; ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ - ರಮೀಜ್ ಹುಸೇನ್

Posted On: 03-06-2023 06:36PM

ಪಡುಬಿದ್ರಿ : ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯ ಮಾತನ್ನು ಈಡೇರಿಸಿದ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರವರಿಗೆ ಅಭಿನಂದನೆಗಳು ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ತಿಳಿಸಿದ್ದಾರೆ.

ಗ್ಯಾರಂಟಿ ಜಾರಿಗಳನ್ನು ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ ಗೊಳಿಸಿದ್ದಲ್ಲದೇ ಸಮಾನ್ಯ ಜನರಿಗೆ ಆಸರೆಯನ್ನು ನೀಡಿದೆ. ಜನ ಸಮಾನ್ಯರು ಬೆಲೆ ಏರಿಕೆ ಹಾಗು ಯುವ ಜನತೆ ನಿರುದ್ಯೋಗದ ಸಮಸ್ಯೆಯಿಂದ ತತ್ತರಿಸಿರುವ‌ ಈ ಸಂದರ್ಭದಲ್ಲಿ ಜನರ ಬದುಕಿಗೆ ಅಸರೆ ನೀಡಿದ‌ ಕಾಂಗ್ರೆಸ್ ‌ಸರಕಾರದ ಈ ಸಾಧನೆ ನಿಜವಾಗಿಯು ಶಾಘ್ಲನೀಯ. ಜನರ ಕಷ್ಟಕ್ಕೆ ಸ್ಪಂದಿಸುವ ‌ಸರಕಾರ ಎಂಬುದನ್ನು ಕಾಂಗ್ರೆಸ್ ಪಕ್ಷದ ‌ಸರಕಾರ ಸಾಬೀತು ಪಡಿಸಿದೆ ಎಂದು ರಮೀಜ್ ಹರ್ಷ ವ್ಯಕ್ತಪಡಿಸಿದ್ದಾರೆ.