ಪಡುಬಿದ್ರಿ.12ಜುಲೈ :- ಸಮಾಜ ಸೇವೆಯನ್ನು ಮೂಲದ್ಯೇಯವೆಂದು ಮೈಗೂಡಿಸಿಕೊಂಡಿರುವ ಪಡುಬಿದ್ರಿಯ ಭಗವತಿ ತಂಡ ಕಳೆದ ಎರಡು ದಿನಗಳ ಹಿಂದೆ ಉಡುಪಿಯ ನೀಲಾವರ "ಕಾಮದೇನು" ಗೋಶಾಲೆಗೆ ಒಂದು ಗೋವು ಮತ್ತು ದನದ ಹಸಿರು ಆಹಾರವನ್ನು ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಮತ್ತು ಭಗವತಿ ತಂಡದ ಸದಸ್ಯರು ಉಪಸ್ಥಿತರಿದ್ದರು
ಈವರೆಗೆ 57 ಗೋವನ್ನು ರಕ್ಷಿಸಿ, ನೀಲಾವರ ಗೋಶಾಲೆಗೆ ನೀಡಿರುವುದರಿಂದ, ಗೋಶಾಲೆಯ ಪ್ರಮಾಣಿಕ ಕೈಂಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಇಂತಹ ಸೇವೆಯನ್ನು ಮಾಡಿರುವ ಭಗವತಿ ತಂಡ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ.. ಉತ್ತಮ ತಂಡವೆನಿಸಲಿ