ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಬೆಳ್ಳೆ ಗ್ರಾಮದ ದಲಿತರಿಗೆ ಸಂಬಂಧಿಸಿದ ಭೂಮಿಯ ಕಡತ ಸರಕಾರಕ್ಕೆ ಸಲ್ಲಿಕೆಯಾಗದೆ ವಿಳಂಬ

Posted On: 14-06-2023 11:05PM

ಕಾಪು : ತಾಲ್ಲೂಕು ಬೆಳ್ಳೆ ಗ್ರಾಮದ ದಲಿತರಿಗೆ ಸಂಬಂಧಿಸಿದ ಭೂಮಿಯ ಕಡತ ತೀರಾ ಕ್ಷುಲ್ಲಕ ಕಾರಣಕ್ಕೆ ಸರಕಾರಕ್ಕೆ ಸಲ್ಲಿಕೆಯಾಗದೆ 2014 ರಿಂದ ಜಿಲ್ಲೆ- ತಾಲ್ಲೂಕು ಹಂತದಲ್ಲಿ ಅಲೆದಾಡುತ್ತಿದೆ. ಈ ಬಗ್ಗೆ ಆ ದಿನಾಂಕದಿಂದ ಈ ವರೆಗೆ ವಿಳಂಬಕ್ಕೆ ಕಾರಣರಾದ ಅತ್ಯಂತ ಗೌರವಯುತ ಸರಕಾರಿ ಅಧಿಕೃತರನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಸಾಮಾಜಿಕ ‌ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಮತ್ತು ಶ್ರೀರಾಮ ದಿವಾಣ ಮೂಡುಬೆಳ್ಳೆ ತಿಳಿಸಿದ್ದಾರೆ.

ಕಡತ ಸಂಖ್ಯೆ: ಎಲ್.ಎನ್.ಡಿ./ಪಿಪಿಡಿಆರ್/ಸಿಆರ್/69/2022. ಹಲವು ಮನವಿಗಳನ್ನು ಸಲ್ಲಿಸಿದರೂ ಜಿಲ್ಲಾಡಳಿತದಿಂದ ಈ ವರೆಗೆ ಕನಿಷ್ಟ ಒಂದು ಉತ್ತರವೂ ಇಲ್ಲ. ಸರಕಾರ ಇದೂ ಸೇರಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ಕಡತಗಳನ್ನು ತನಿಖೆಗೊಳಪಡಿಸಬೇಕು ಎಂದು‌ ಆಗ್ರಹಿಸಿದ್ದಾರೆ.