ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಬೆಳಪು ರಾಜು ಪೂಜಾರಿಗೆ ನೆರವು

Posted On: 13-07-2020 10:49PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಕಾಪು ಪಡುಬಿದ್ರಿ ಘಟಕದ ವತಿಯಿಂದ.. ರಾಜು ಪೂಜಾರಿ ಅವರನ್ನು ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಧನಸಹಾಯದೊಂದಿಗೆ ಶಾಲು, ಹಣ್ಣು , ಹಂಪಲು ಕೊಟ್ಟು ಗೌರವಿಸಲಾಯಿತು. ರಾಜು ಪೂಜಾರಿಯವರು ಬೆಳಪು ಗ್ರಾಮದ ದಿವಂಗತ ಚಂದು ಪೂಜಾರಿ ಮತ್ತು ಅಕ್ಕು ಪೂಜಾರ್ತಿ ದಂಪತಿಯ ಪುತ್ರ, ರಾಜು ಪೂಜಾರಿ ಯವರು ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ 25 ವರ್ಷ ಮುಂಬೈಯಲ್ಲಿ ದುಡಿದು ಆ ಬಳಿಕ ದೈವದ ಆಕರ್ಷಣೆಗೆ ಒಳಗಾಗಿ ಊರಲ್ಲಿ ನೆಲೆನಿಂತರು. ಬೆಳಪು ಜಾರಂದಾಯ ದೈವಸ್ಥಾನದಲ್ಲಿ ದೈವದ ಅನುಗ್ರಹ ಎಣ್ಣೆ ಪಡೆದು ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಜಾರಂದಾಯ ಬಂಟ ಪಾತ್ರಿಯಾಗಿ ಎಣ್ಣೆ ಪಡೆದು ಉಡುಪಿ ಜಿಲ್ಲೆಯ ಹತ್ತು ಹಲವಾರು ಪ್ರಸಿದ್ಧ ಕ್ಷೇತ್ರ, ದೈವಸ್ಥಾನಗಳಲ್ಲಿ ಬಂಟ ಪಾತ್ರಿಯಾಗಿ ದರ್ಶನ ಸೇವೆಯನ್ನು ನೀಡಿದ್ದಾರೆ ಐದು ವರ್ಷಗಳ ಹಿಂದೆ ದೈವಾರಾಧನೆ ಕ್ಷೇತ್ರದಲ್ಲಿ ನಿವೃತ್ತಿ ಹೊಂದಿದ್ದಾರೆ. ಇದೀಗ 90ರ ಇಳಿವಯಸ್ಸಿನಲ್ಲಿ ಪತ್ನಿ ಗಿರಿಜಾ ಪೂಜಾರ್ತಿ ಮಕ್ಕಳಾದ ವೆಂಕಟೇಶ್ ಚಂದ್ರಾವತಿ ಗಂಗಾಧರ ರಮೇಶ್ ಬಾಲಕೃಷ್ಣ ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.. ಕೋರೋನ ಎಂಬ ಮಹಾರೋಗದ ತುರ್ತು ಸಂದರ್ಭದಲ್ಲಿ ಯಾವುದೇ ಸರ್ಕಾರವು ದೈವ ಚಾಕ್ರಿ ವರ್ಗದವರಿಗೆ ಸಹಾಯಧನ ಇತರ ಯಾವುದೇ ಯೋಜನೆಗಳು ನೆರವಿಗೆ ಬಂದಿರುವುದಿಲ್ಲ ಈ ತುರ್ತು ಸಂದರ್ಭದಲ್ಲಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಹಾಗೂ ಕಾಪು ಪಡುಬಿದ್ರಿ ಘಟಕದ ಸದಸ್ಯರ ಧನಸಹಾಯ, ನೆರವಿನೊಂದಿಗೆ ಗೌರವಿಸಲಾಯಿತು ರಾಜು ಪೂಜಾರಿಯವರಿಗೆ ತುಳು ನಾಡಿನ ಸಮಸ್ತ ದೈವ-ದೇವರು ಅವರಿಗೆ ಆರೋಗ್ಯ ಆಯುಷ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಸರ್ವ ಸದಸ್ಯರು ಪ್ರಾರ್ಥಿಸುತ್ತೇವೆ.. ಈ ಒಂದು ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಘವ ಸೇರಿಗಾರ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಹಾಗೂ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಹಾಗೂ ಸತೀಶ್ ಪೂಜಾರಿ ಶಮ್ಮಿ ಕಪೂರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಪೂಜಾರಿ ಕಟಪಾಡಿ ಗೌರವಾಧ್ಯಕ್ಷರಾದ ಸುಧಾಕರ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು. ವರದಿ : ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ