ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಡಾII ದೇವದಾಸ್ ಕಾಮತ್ ಹಿರಿಯಡ್ಕರವರಿಗೆ ಗೌರವಾಪ೯ಣೆ

Posted On: 24-06-2023 09:55PM

ಉಡುಪಿ : ಭಾರತೀಯ ವೈದ್ಯ ಸಂಘ ಕನಾ೯ಟಕ ಇದರ ವತಿಯಿಂದ ವೈದ್ಯರ ದಿನದ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾII ದೇವದಾಸ ಕಾಮತ್ ಡಾII ಸುಧಾ ಕಾಮತ್ ದಂಪತಿ ಹಿರಿಯಡ್ಕ ಇವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ವತಿಯಿಂದ ಶನಿವಾರ ಕಾಮತ್ ಕ್ಲಿನಿಕ್‌ ನಲ್ಲಿ ಗೌರವಿಸಲಾಯಿತು.

ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಗೌರವಾದ್ಯಕ್ಷ ವಿಶ್ವನಾಥ್ ಶೆಣೈ ಗೌರವಿಸಿ ಶುಭ ಹಾರೈಸಿದರು. ಈ ಸಂದಭ೯ ಕ .ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ರಾಘವೇಂದ್ರ ಪ್ರಭು, ಕವಾ೯ಲು ಮತ್ತು ವೈದ್ಯರ ಕುಟುಂಬಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.