ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಮಲ್ಲಾರು ಗ್ರಾಮದ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ರಸ್ತೆ ಬದಿ ಇರುವ ವಿದ್ಯುದೀಪ ಕಂಬದಿಂದ ಮನೆಗೆ ಸಂಪರ್ಕದ ಸರ್ವಿಸ್ ವಯರ್ ನಲ್ಲಿ ಬಳ್ಳಿಗಳು ಪಸರಿಸಿ ಅವಘಡಕ್ಕೆ ಎಡೆ ಮಾಡಿ ಕೊಟ್ಟಂತಿದೆ.
ಈ ಬಗ್ಗೆ ಸಂಬಂಧಪಟ್ಟ ಕಾಪು ಮೆಸ್ಕಾಂನವರು ಕೂಡಲೇ ತೆರೆವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.