ಜುಲೈ 3 - ಸೆಪ್ಟೆಂಬರ್ 29 : ಪಡುಕುತ್ಯಾರುವಿನಲ್ಲಿ ಆನೆಗುಂದಿಶ್ರೀಗಳ ಚಾತುರ್ಮಾಸ್ಯ ; ಸಿದ್ಧತೆಗಳು ಪೂರ್ಣ
Posted On:
29-06-2023 07:57PM
ಕಾಪು : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಜುಲೈ 3ರಿಂದ ಸೆಪ್ಟೆಂಬರ್ 29ರ ವರೆಗೆ ಪಡುಕುತ್ಯಾರಿನಲ್ಲಿ ನಡೆಯಲಿದೆ.
ಆನೆಗುಂದಿ ಶ್ರೀಗಳವರ ಶೋಭಕೃತ್ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯವಾಗಿದ್ದು ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ 8ನೇ ಬಾರಿಗೆ ಸಂಪನ್ನಗೊಳ್ಳಲಿದೆ.
ಜುಲೈ 3ರಂದು ವಿಶ್ವಕರ್ಮ ಯಜ್ಞ, ವ್ಯಾಸ ಪೂಜೆ ಯೊಂದಿಗೆ ವ್ರತ ಸಂಕಲ್ಪ ನಡೆಯಲಿದ್ದು ಗುರುಪಾದ ಪೂಜೆಯ ಬಳಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯು ನಡೆಯಲಿದೆ. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿದೆ.
ಪ್ರತಿದಿನ ಬೆಳಗ್ಗೆ ಭಜನಾ ಸಂಕೀರ್ತಾನಾ ಸೇವೆ, ಗುರುಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ಪಾರಾಯಣ, ಭಾನುವಾರಗಳಂದು ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳು ನಡೆಯಲಿವೆ.
ಜುಲೈ 15ರಂದು ಆನೆಗುಂದಿಶ್ರೀಗಳವರ ಜನ್ಮವರ್ಧಂತಿಯು ನಡೆಯಲಿದ್ದು ವಿಶೇಷ ಹೋಮ ಹವನ ವೈದಿಕ ಕಾರ್ಯಕ್ರಮಗಳು, ಜಗದ್ಗುರುಗಳವರ ತುಲಾಭಾರ ಸೇವೆ ನಡೆಯಲಿದೆ.
ಬಳಿಕ ನಡೆಯುವ ಧರ್ಮ ಸಂಸತ್ತಿನಲ್ಲಿ ವೇ. ಬ್ರ ಶಂಕರ ಆಚಾರ್ಯ ಕಡ್ಲಾಸ್ಕರ್ ಪಂಡಿತ್ ಅವರಿಗೆ ವೈದಿಕ ವಿಭಾಗದಲ್ಲಿ ಮಹಾಸಂಸ್ಥಾನದ ಆಸ್ಥಾನ ವಿದ್ವಾನ್ ಪದವಿಯನ್ನು ಪ್ರದಾನ ಮಾಡಲಾಗುವುದು.
ಇದೇ ದಿನ ಶ್ರೀ ನಾಗಧರ್ಮೇಂದ್ರ ಸರಸ್ವತೀ ವಿದ್ಯಾರ್ಥಿ ಭವನದ ಉದ್ಘಾಟನೆ ನಡೆಯಲಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಕಾರ್ಕಳ, ಸ್ಥಳೀಯ ಶಾಸಕ ಸುರೇಶ್ ಶೆಟ್ಟಿ, ಸಮಾಜ ಸೇವಕ ಮಿಥುನ್ ಕುಮಾರ್ ರೈ ಮುಂತಾದವರು ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 29ರಂದು ಚಾತುರ್ಮಾಸ್ಯದ ಸಮಾರೋಪವು ನಡೆಯಲಿದ್ದು ಸೀಮೋಲ್ಲಂಘನ ಧಾರ್ಮಿಕ ಸಭೆಯು ನಡೆಯಲಿದ್ದು ವಿವಿಧ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ. ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.