ಕಾಪು : ಸಮಾಜದಲ್ಲಿರುವ ಅಶಕ್ತ ಕುಟುಂಬಕ್ಕೆ ನೆರವಾಗಲು, ಹಿಂದುತ್ವಕ್ಕೆ ಧಕ್ಕೆಯಾದಲ್ಲಿ ಪ್ರತಿಭಟಿಸಲು, ಸಮಾಜದಹಿತಕ್ಕಾಗಿ ಹಿಂದೂ ಸಮಾಜದ ಪರವಾಗಿ ಟೀಂ ಭಗ್ವ ಎಂಬ
ಯುವಕರ ತಂಡವೊಂದು ರಚನೆಗೊಂಡಿದ್ದು ತಂಡದ ಉದ್ಘಾಟನೆಯನ್ನು ಜುಲೈ 5 ರಂದು ಮೂಡುಬೆಳ್ಳೆಯಲ್ಲಿ ಕಾಪು ಉದ್ಯಮಿ ಸುಧೀರ್ ಸೋನು ಹಾಗೂ ಸಂಘಟನೆಯ ಪ್ರಮುಖರಾದ ವಿಖ್ಯಾತ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಗ್ವ ತಂಡದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲ್ಯ ಯೋಗೀಶ್ ಶೆಟ್ಟಿ ಸ್ವಾಗತಿಸಿದರು. ಮೂಳೂರು ಶ್ರವಣ್ ದೇವಾಡಿಗ ವಂದಿಸಿದರು.