ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ - ವನಮಹೋತ್ಸವ
Posted On:
07-07-2023 07:47PM
ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ ಇವರ ಆಶ್ರಯದಲ್ಲಿ ಕಾಪುವಿನಲ್ಲಿ ವನಮಹೋತ್ಸವ ಆಚರಿಸಲಾಯಿತು.
ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಮತ್ತು ಮಂಜುನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು. ಜೀವನ್ ದಾಸ್ ಶೆಟ್ಟಿ ಮರಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಸಂಸ್ಥೆಯ ವಿನೋದ್ ರಾವ್ ವನಮಹೋತ್ಸವದ ಕುರಿತು ಮಾತನಾಡಿದರು.
ಈ ಸಂದರ್ಭ ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಸಂಸ್ಥೆಯ ಉದ್ಯೋಗಿಗಳಿಗೆ ಹೂವಿನ ಮತ್ತು ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಆಯೋಜಕರಾದ ಸಂಸ್ಥೆಯ ರಶ್ಮಿ ಎಸ್ ಎಮ್ ಸ್ವಾಗತಿಸಿದರು. ವೀಣಾ ಶೆಟ್ಟಿ ವಂದಿಸಿದರು.