ಕಾಪು : ಇಲ್ಲಿನ ಕೊಂಬಗುಡ್ಡೆ ಮಲ್ಲಾರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೂತನ ಪಾಕಶಾಲೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ರವಿವಾರ ಉದ್ಘಾಟಿಸಿದರು.
ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ ರೂ. 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಪಾಕಶಾಲೆಯ ನಿರ್ಮಾಣ ಪೂರ್ಣಗೊಂಡಿದೆ.
ಅಭಿನಂದನೆ : ಬಬ್ಬುಸ್ವಾಮಿ ದೈವಸ್ಥಾನ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪುಷ್ಪರಾಜ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸುಧಾಕರ್ ಶೆಟ್ಟಿ ಮಲ್ಲಾರು, ಪುರಸಭಾ ಸದಸ್ಯರಾದ ಉಮೇಶ ಕರ್ಕೇರ, ಹರಿಣಿ, ಕ್ಷೇತ್ರದ ಗುರಿಕಾರರಾದ ಶೀನ ಮಲ್ಲಾರು, ಕೃಷ್ಣ ಮಾಸ್ತರ್, ಸಾಧು ಮಾಸ್ತರ್ ಮುಖೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಂಡಾಳ ಮಹಾ ಸಭಾದ ಉಡುಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಮಲ್ಲಾರು ನಿರೂಪಿಸಿದರು.