ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ "ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆ ಅಭಿಯಾನ" ಜುಲೈ 9 ರಿಂದ ಅಕ್ಟೋಬರ್ 15 ರ ವರೆಗೆ ನಡೆಯಲಿದ್ದು, ಈ ಸಲುವಾಗಿ ಜುಲೈ 9 ರಂದು ನಡೆದ "ದೀಕ್ಷಾ ದೀಪ ಪ್ರಜ್ವಲನ ಕಾರ್ಯಕ್ರಮಕ್ಕೆ" ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಸಮಿತಿ ಪದಾಧಿಕಾರಿಗಳು, ಸಮಿತಿಯ ಗೌರವಾಧ್ಯಕ್ಷರುಗಳು, ಸದಸ್ಯರು ಹಾಗೂ ದೀಕ್ಷೆ ಸ್ವೀಕರಿಸಿದ ಸಂಯೋಜಕರು, ಭಕ್ತರು ಉಪಸ್ಥಿತರಿದ್ದರು.