ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರಸ್ತೆಯಲ್ಲಿ ಕಸವೋ ಅಥವಾ ಕಸದಲ್ಲಿ ರಸ್ತೆಯೋ ತಿಳಿಯದಾಗಿದೆ

Posted On: 19-07-2020 09:59PM

ಕಟಪಾಡಿ ರಾಷ್ಟ್ರೀಯ ಹೆದ್ದಾರಿ (ಕೆನರಾ ಬ್ಯಾಂಕ್) ಎದುರಿನ ರಸ್ತೆಯು ಕಸಮಯವಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಮನೆ, ವಾಣಿಜ್ಯ ಸಂಕೀಣ೯ಗಳಿವೆ ಇಲ್ಲಿಂದ ನಡೆದುಕೊಂಡು ಹೋಗುವವರ ಪಾಡು ದೇವರಿಗೆ ಪ್ರೀತಿ. ಕಸದಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬರುವ ಬೀದಿ ನಾಯಿಗಳ ಹಿಂಡಿನಿಂದ ಈ ರಸ್ತೆಯಲ್ಲಿ ಸಾಗಲು ಆಗದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯರ ಪ್ರಕಾರ ವಾಹನಗಳಲ್ಲಿ ಬಂದು ಕಸವನ್ನು ಎಸೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಈ ರಸ್ತೆಯು ಮಿನಿ ಡಂಪಿಂಗ್ ಯಾಡ್೯ ಯಾಗಿ ಪರಿಣಮಿಸಿದೆ.ಇದರಿಂದ ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ .ಕೂಡಲೇ ಸಂಬಂಧ ಪಟ್ಟ.ಗ್ರಾ.ಪಂ ಕ್ರಮ ಕೈಗೊಳ್ಳಬೇಕು ಅಲ್ಲದೆ ಕಸ ಹಾಕುವವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಉಡುಪಿ