ಜುಲೈ 16 : ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಬೆಳಪು - ವಿದ್ಯಾರ್ಥಿವೇತನ ವಿನಿಯೋಗ ಕಾರ್ಯಕ್ರಮ
Posted On:
15-07-2023 07:20AM
ಕಾಪು : ಶ್ರೀ ಪಂಚಾಕ್ಷರಿ ಯಕ್ಷಗಾನ ಮಂಡಳಿ, ಎಲ್ಲೂರು ಟೆಕ್ ಸೆಲ್ ಅಟೋಮೇಶನ್ ಪ್ರೈ. ಲಿ.
ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜುಲೈ 16, ಆದಿತ್ಯವಾರ ಸಂಜೆ 4 ಗಂಟೆಗೆ ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಬೆಳಪು ಇಲ್ಲಿ
ವಿದ್ಯಾರ್ಥಿವೇತನ ವಿನಿಯೋಗ ಕಾರ್ಯಕ್ರಮ ಜರಗಲಿದೆ.
ಬೆಂಗಳೂರಿನ 'ಟೆಕ್ ಸೆಲ್" ಅಟೋಮೇಶನ್ ಪ್ರೈ.ಲಿ. ಸಂಸ್ಥೆಯು ಎಲ್ಲೂರು ಪರಿಸರದ ಒಂಬತ್ತು ಶಾಲೆಗಳ ಮೂವತ್ತೈದು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಿದೆ.
ಟೆಕ್ ಸೆಲ್ ಅಟೋಮೇಶನ್ ಎಂ.ಡಿ ಆರ್.ಆರ್. ಹರೀಶ್ ರಾವ್ ಮತ್ತು ರೂಪಾ ಹರೀಶ್ ರಾವ್ ವಿದ್ಯಾರ್ಥಿ ವೇತನದ ಪ್ರಾಯೋಜಕರಾಗಿದ್ದು, ಶ್ರೀ ದುರ್ಗಾ ದೇವಸ್ಥಾನ, ಕುಂಜೂರು ಅಧ್ಯಕ್ಷರಾದ ದೇವರಾಜ ರಾವ್, ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪಟೇಲ್ ಪ್ರಕಾಶ ರಾವ್, ಬ್ರಾಹ್ಮಣ ಸಂಘ, ಬೆಳಪು ವಲಯದ ಅಧ್ಯಕ್ಷರಾದ ನಡಿಮನೆ ವಾದಿರಾಜ ರಾವ್, ರಾಘವೇಂದ್ರ ರಾವ್ ಎಲ್ಲೂರು, ಕೆ.ಎಲ್.ಕುಂಡಂತಾಯ ಕುಂಜೂರು ಉಪಸ್ಥಿತಿಯಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಕ್ಷರೀ ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಕೆ. ಶ್ರೀನಿವಾಸ ಉಪಾಧ್ಯಾಯ ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಯೋಜನೆ, ನಿರ್ವಹಣೆ ಗಣೇಶ್ ರಾವ್ ಎಲ್ಲೂರು ಮಾಡಲಿದ್ದು, ಅಂದು ಬೆಳಗ್ಗೆ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೇ.ಮೂ. ಗೋಪಾಲ ಭಟ್,ವೇ. ಮೂ. ಶ್ರೀ ಕೃಷ್ಣಮೂರ್ತಿ ಭಟ್, ಹಾಗೂ ವೇ.ಮೂ.ಸುಬ್ರಾಯ ಭಟ್ ಅವರನ್ನು ಹಾಗೂ ಶ್ರೀ ಬಡಿಕೇರಿ ಹರದಾಸ ರಾವ್ ಅವರನ್ನು ಅವರವರ ಮನೆಗೆ ಹೋಗಿ ಸಮ್ಮಾನಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.