ಬ್ರಹ್ಮಾವರ : ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ
Posted On:
16-07-2023 05:46PM
ಬ್ರಹ್ಮಾವರ : ವಿದ್ಯಾಮಂದಿರ ಶಾಲಾ ಹಳೆ ವಿದ್ಯಾಥಿ೯ ಸಂಘ, ಸಾವ೯ಜನಿಕ
ಗಣೇಶೋತ್ಸವ ಸಮಿತಿ ಹಾರಾಡಿ- ಸಾಲಿಕೇರಿ, ಕಾಮಧೇನು ಕಲ್ಪತರು ಸೇವಾ ಸಮಿತಿ ಹಾರಾಡಿ, ಜಿ.ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್, ರೋಟರಿ ರೋಯಲ್ ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘ, ಕುಂದಾಪುರ ರೂರಲ್ ಆಯುವೇ೯ದ ಮೆಡಿಕಲ್ ಕಾಲೇಜು, ರಕ್ತನಿಧಿ ಕೇಂದ್ರ, ಮಿಷನ್ ಆಸ್ಪತ್ರೆ, ಎಸ್.ಎಸ್.ಎಫ್ ಹೊನ್ನಾಳ ಇದರ ಜಂಟಿ ಆಶ್ರಯದಲ್ಲಿ ಜುಲೈ 16ರಂದು ಹಾರಾಡಿ ಜಿ.ಎಂ ವಿದ್ಯಾನಿಕೇತನದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ನಡೆಯಿತು.
ಕಾಯ೯ಕ್ರಮವನ್ನು ಜಿ.ಎಂ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥರಾದ
ಪ್ರಕಾಶ್ ಚಂದ್ರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜ್ಞಾನ ವಸಂತ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಸಂಸ್ಥೆಗಳ ಪದಾಧಿಕಾರಿಗಳಾದ ರಾಘವ ಶೆಟ್ಟಿ, ಅಭಿರಾಮ ನಾಯಕ್,ವಿವೇಕಾನಂದ ಕಾಮತ್, ಮಧುಸೂಧನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ, ಪ್ರಸನ್ನ ಕಾರಂತ್, ಡಾ. ಪ್ರಸನ್ನ ಐತಾಳ, ಡಾ. ವಿನಾಯಕ್ ಅಂಚನ್, ಡಾ. ಗಣೇಶ್ ಕಾಮತ್, ಆಯುವೇ೯ದ ಕಾಲೇಜಿನ ವೈದ್ಯರು ಉಪಸ್ಥಿತರಿದ್ದರು.ಸುಮಾರು 200ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.